ಮುಸ್ಲಿಂ ಮುಖಂಡರ ಸವಾಲು ಸ್ವೀಕರಿಸಿ ಬಿ.ಸಿ.ರೋಡ್ ಚಲೋಗೆ ಕರೆ ನೀಡಿದ ಭಜರಂಗದಳ
ಮಂಗಳೂರು: ಇಂದು ಬಿ.ಸಿ.ರೋಡ್ ಚಲೋಗೆ ಭಜರಂಗದಳ ಕರೆ ನೀಡಿತ್ತು. ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ಗೆ ಮುಸ್ಲಿಂ ಮುಖಂಡರ ಸವಾಲು ಹಿನ್ನೆಲೆ ಈ ಚಲೋಗೆ ಕರೆ ನೀಡಲಾಗಿತ್ತು. ಇಂದು ಈದ್ ಮಿಲಾದ್ ಹಿನ್ನೆಲೆ ಬಿ.ಸಿ.ರೋಡ್ ಚಲೋ ನಡೆಸಲಾಗುವುದು ಎಂದು ಹೇಳಲಾಗಿತ್ತು. ಫೇಸ್ಬುಕ್ನಲ್ಲಿ ಭಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಈ ಬಗ್ಗೆ ಪೋಸ್ಟ್ನ್ನು ಹಂಚಿಕೊಂಡಿದರು.
ಬೆಳಿಗ್ಗೆ ಬಿ.ಸಿ.ರೋಡ್ಗೆ ಬರೋದಾಗಿ ಪುನೀತ್ ಸವಾಲು ಹಾಕಿದ್ದರು. ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ, ನಾವು ಬರುತ್ತಿದ್ದೇವೆ’ ಎಂದು ಹಾಕಿದರು. ನಿಮಗೆ ತಾಕತ್ತು ಇದ್ದರೆ ತಡೆಯಿರಿ, ನೀನು ಹೇಳಿದ ಜಾಗಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ‘ಹಿಂದುತ್ವ ಮೇಲಾ ಅಥವಾ ಜಿಹಾದಿಗಳಾದ ನೀವು ಮೇಲಾ ಎಂದು ನೋಡೆ ಬಿಡುವ’ ಎಂದು ಸವಾಲು ಹಾಕಿದ್ದಾರೆ.
ಇನ್ನು ಇದಕ್ಕೆ ಎದುರಾಗಿ ಮುಸ್ಲಿಂ ಮುಖಂಡರು ಕೂಡ ಸವಾಲು ಹಾಕಿದ್ದಾರೆ. ತಾಕತ್ತಿದ್ರೆ ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ಸವಾಲು ಹಾಕಿದ್ದಾರೆ. ಇನ್ನು ಈ ಹಿಂದೆ ಈದ್ ಮೆರವಣಿಗೆಗೆ ಹಿಂದು ಮುಖಂಡರಿಗೆ ಆಹ್ವಾನ ನೀಡಿ ಸವಾಲು ಆಡಿಯೋ ಆಗಿದೆ. ಆಡಿಯೋ ಹರಿ ಬಿಟ್ಟಿದ್ದ ಇಬ್ಬರ ಮೇಲೆ ಎಫ್.ಐ.ಆರ್ ಹಾಕಲಾಗಿದೆ. ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸದಸ್ಯನ ಸಹೋದರ ಹಸೈನಾರ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ನಾಗಮಂಗಲ ಗಲಾಟೆ ಹಿನ್ನೆಲೆ ಈದ್ ಮೆರವಣಿಗೆ ತಡೆಯುವ ಎಚ್ಚರಿಕೆ ನೀಡಲಾಗಿತ್ತು. ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಮಿಲಾದ್ ಮೆರವಣಿಗೆಗೆ ಬರುವಂತೆ ಸವಾಲ್ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಸವಾಲು ಸ್ವೀಕರಿಸಿ ಬಿ.ಸಿ.ರೋಡ್ ಚಲೋ ಕರೆ ನೀಡಿದೆ ಭಜರಂಗದಳ-ವಿ.ಎಚ್.ಪಿ.
ಬಂಟ್ವಾಳದಲ್ಲಿ ಶಾಂತಿಯುತ ಈದ್ ಮೆರವಣಿಗೆ:
ಬಂಟ್ವಾಳದಲ್ಲಿ ಶಾಂತಿಯುತ ಈದ್ ಮೆರವಣಿಗೆ ಆರಂಭವಾಗಿದೆ. ಬಂಟ್ವಾಳದ ಮೂರ್ನಾಲ್ಕು ಕಡೆ ಮಸೀದಿಯಿಂದ ಮೆರವಣಿಗೆ ನಡೆಸಲಾಗಿದೆ. ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.