ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಮೇಯರ್, ಉಪ ಮೇಯರ್ ಸ್ಥಾನ ಬಿಜೆಪಿಗೆ
ಮಂಗಳೂರು ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಮೇಯರ್ ಆಗಿ ಬಿಜೆಪಿಯಿಂದ ಮನೋಜ್ ಕುಮಾರ್, ಹಾಗೂ ಉಪಮೇಯರ್ ಆಗಿ ಭಾನುಮತಿ ಆಯ್ಕೆಯಾಗಿದ್ದಾರೆ. ಮನೋಜ್ ಕುಮಾರ್ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಮೇಯರ್ ಚುನಾವಣೆಯಲ್ಲೂ ಕೂಡ ಬಿಜೆಪಿ ಸದಸ್ಯೆ ಭಾನುಮತಿ ಆಯ್ಕೆ ಆಗಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ಝೀನತ್ ಶಂಶುದ್ದೀನ್ ಸೋಲು ಉಂಟಾಗಿದೆ.
ಒಟ್ಟು 60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿದ್ದು, 60 ಸದಸ್ಯರ ಜೊತೆಗೆ ಬಿಜೆಪಿಯ 2 ಶಾಸಕರು, 1 ಸಂಸದ, ಕಾಂಗ್ರೆಸ್ ನ 2 MLCಗಳಿಗೆ ಮತದಾನ ಮಾಡಿದ್ದಾರೆ. ಬಿಜೆಪಿ 47, ಕಾಂಗ್ರೆಸ್ 16, ಎಸ್‌ಡಿಪಿಐ ಇಬ್ಬರು ಸೇರಿ 65 ಮಂದಿಗೆ ಮತದಾನ ಮಾಡಲಾಗಿದೆ. ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ನ ಒಬ್ಬರು ಸದಸ್ಯರು, 2 ಕಾಂಗ್ರೆಸ್ MLC ಗಳು ಗೈರಾಗಿದ್ದರು.
ಉಪಮೇಯರ್ ಅಭ್ಯರ್ಥಿ ಬಿಜೆಪಿಯ ಭಾನುಮತಿಗೆ ಒಟ್ಟು 47 ಮತ ಬಂದಿದ್ದು. ಕಾಂಗ್ರೆಸ್ ನ ಝೀನತ್ ಶಂಶುದ್ದೀನ್ ಗೆ 14 ಮತ ಬಂದಿದೆ. ಮೈಸೂರಿನ ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್‌ಗೆ ಹಿಂದುಳಿದ ವರ್ಗ ಎ ಮೀಸಲಾಗಿತ್ತು. ಆಡಳಿತದ ಅವಧಿ ಐದು ತಿಂಗಳು ಮಾತ್ರ ಆಗಿರುತ್ತದೆ. ಈ ಬಾರಿ ಹಾಲಿ ಪಾಲಿಕೆ ಆಡಳಿತದ ಕೊನೆ ಅವಧಿಯ ಆಯ್ಕೆ ಇದಾಗಿದೆ.