ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ “ಆರೋಗ್ಯ ರಕ್ಷಾ ಸಮಿತಿ”ಗೆ ಆಯ್ಕೆ
ಬಂಟ್ವಾಳ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯ “ಆರೋಗ್ಯ ರಕ್ಷಾ ಸಮಿತಿ”ಗೆ 8 ಮಂದಿ ಅಧಿಕಾರೇತರ ಸದಸರನ್ನು ನಾಮ ನಿರ್ದೇಶನಗೊಳಿಸಿ ಸರಕಾರ ಆದೇಶಿಸಿದೆ.
ಕಾವಳಪಡೂರು ಗ್ರಾಮದ ಹಂಚಿಕಟ್ಟೆ ನಿವಾಸಿ ಜೋಸೆಫ್ ಪ್ರವೀಣ್ ರೊಡ್ರಿಗಸ್, ನರಿಕೊಂಬುಗ್ರಾಮದ ನೆಹರುನಗರ ನಿವಾಸಿ ಮಹಮ್ಮದ್ ರಿಯಾಝ್ ,ಬಂಟ್ವಾಳ ಕಸ್ಬಾ ಗ್ರಾಮದ ಅರ್ಬಿಗುಡ್ಡೆ ನಿವಾಸಿ
ವೆಂಕಪ್ಪ ಪೂಜಾರಿ ಬಂಟ್ವಾಳ, ಭಂಡಾರಿಬೆಟ್ಟು ನಿವಾಸಿ ಅಶೋಕ್, ಭಂಡಾರಿಬೆಟ್ಟು,ಪಾಣೆಮಂಗಳೂರು ಗ್ರಾಮದ ಬೋಳಂಗಡಿ ನಿವಾಸಿ ರೇಷ್ಮೆ ತೇಲೀಸ್, ಬಂಟ್ವಾಳ ಕಸ್ಬಾ ಗ್ರಾಮದ ಮಂಡಾಡಿ ನಿವಾಸಿ ಪುರುಷೋತ್ತಮ ಬಂಗೇರ, ನರಿಕೊಂಬುಗ್ರಾಮದ ಪೊಯಿತಾಜೆ ನಿವಾಸಿ ರವೀಂದ್ರ ಸಪಲ್ಯ, ಕೊಳ್ನಾಡುಗ್ರಾಮದ ಕಡಮಜಿಕೋಡಿ ನಿವಾಸಿ ಶಿವಾನಂದ ನಾಯ್ಕ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿಕುಂದರ್ ತಿಳಿಸಿದ್ದಾರೆ.
ಮಾಜಿ ಸಚಿವ ರಮಾನಾಥ ರೈ ಅವರ ಶಿಫಾರಸ್ಸಿನಂತೆರಾಜ್ಯಆರೋಗ್ಯ ಸಚಿವರು,
ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಈ ಆದೇಶ ಹೊರಡಿಸಿದ್ದಾರೆ.