
ಮಂಗಳೂರು: ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಬೈಕ್ ಸವಾರನೋರ್ವ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದ್ದು, ಸಾರ್ವಜನಿಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಬೈಕ್ ಸವಾರ ಪಾದಚಾರಿಗೆ ಡಿಕ್ಕಿ ಹೊಡೆದಕ್ಕೆ ಪಾದಚಾರಿಯ ಮೊಬೈಲ್ ರಸ್ತೆಗೆ ಬಿದ್ದಿದೆ. ಈ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ. ಪಾದಚಾರಿ ಸವಾರನಿಗೆ ನಯವಾಗಿ ಹೆಚ್ಚು ಜಾಗರೂಕರಾಗಿ ವಾಹನ ಚಲಾಯಿಸುವಂತೆ ಕೇಳಿದಾಗ, ಬೈಕ ಸವಾರ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಸವಾರ ಮತ್ತು ನೆರೆದಿದ್ದ ಜನರ ನಡುವೆ ಮಾತಿನ ಚಕಮಕಿ ನಡೆದಿದೆ.
ಗಣೇಶೋತ್ಸವವನ್ನು ವೀಕ್ಷಿಸಲು ಬಸ್ ನಿಲ್ದಾಣದಲ್ಲಿ ಅಪಾರ ಜನಸ್ತೋಮವೇ ಜಮಾಯಿಸಿದ್ದು, ಈ ನಡುವೆ ಈ ಘಟನೆ ನಡೆದಿದೆ. ಇದರಿಂದ ಅಲ್ಲಿ ಜನರು ಸ್ವಲ್ಪ ಹೊತ್ತು ಗೊಂದಲ ಉಂಟಾಗಿದೆ. ಇನ್ನು ಪಾದಚರಿ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಸ್ಥಳೀಯರು ಹೇಳಿದ್ದಾರೆ. ಈ ಸಮಯದಲ್ಲಿ ಯುವಕ ಮತ್ತು ಘಟನಾ ಸ್ಥಳದಲ್ಲಿ ಸೇರಿದ ಜನರ ನಡುವೆ ವಾಗ್ವಾದ ನಡೆದಿದೆ. ಜನಜಂಗುಳಿ ಹೆಚ್ಚಾದಾಗ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಯುವಕನನ್ನು ಠಾಣೆಗೆ ಕರೆದೊಯ್ದರು. ಗಣೇಶೋತ್ಸವ ಮೆರವಣಿಗೆಗೆ 100ರಿಂದ 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು.
