Published On: Thu, Sep 12th, 2024

ಮಂಗಳೂರು: ತ್ಯಾಜ್ಯ ಸಾಗಣೆ ವಾಹನದಲ್ಲಿ ಜೀವಂತ ನಾಯಿಯನ್ನು ಸಾಗಿಸುತ್ತಿದ್ದ ಚಾಲಕನಿಗೆ ಎಂಸಿಸಿ ಎಚ್ಚರಿಕೆ

ಮಂಗಳೂರಿನಲ್ಲಿ ಒಂದು ಅವಮಾನವೀಯ ಘಟನೆಯೊಂದು ನಡೆದಿದೆ. ಜೀವಂತ ನಾಯಿಯನ್ನು ತ್ಯಾಜ್ಯ ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಚಾಲಕನಿಗೆ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು, ನಾಯಿಯನ್ನು ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ತುಂಬುತ್ತಿರುವ ವೀಡಿಯೊ ವೈರಲ್​​ ಆಗಿದ್ದು. ಈ ವಿಡಿಯೋ ವೈರಲ್​​​ ನಂತರ ಪ್ರಾಣಿ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದರು.

ನಾಯಿಯಿಂದ ತೊಂದರೆಯಾಗುತ್ತಿದೆ ಎಂದು ಡೊಂಗರಕೇರಿ ನಿವಾಸಿಯೊಬ್ಬರು ಪೌರಕಾರ್ಮಿಕರನ್ನು ಕರೆಸಿ ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದರು. ಈ ಬಗ್ಗೆ ಮಂಗಳವಾರ MCC ಗಮನಕ್ಕೆ ಬಂದಿದ್ದು, ಪೌರಕಾರ್ಮಿಕನನ್ನು ಕರೆಸಿ, ಈ ಬಗ್ಗೆ ವಿಚಾರಿಸಿ, ಮುಂದೆ ಈ ರೀತಿ ನಡೆಯಂತೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ನಾಯಿಯ ಮಾಲೀಕರು ವಿದೇಶದ್ದು, ಇದು ಆ ಮನೆಯಲ್ಲಿರುವ ಕಾರಣ ಅಕ್ಕಪಕ್ಕದ ಮನೆಯವರಿಗೆ ನಿವಾಸಿಗಳು ತೊಂದರೆಯಾಗುತ್ತಿರುವ ಕಾರಣಕ್ಕೆ ನಾಯಿಯನ್ನು ತೆಗೆದುಕೊಂಡು ಹೋಗುವಂತೆ ಪೌರಕಾರ್ಮಿಕನಿಗೆ ಹೇಳಿದ್ದಾರೆ. ಇದರಿಂದ ನಾಯಿಯನ್ನು ಪೌರಕಾರ್ಮಿಕರು ವಾಹನದಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಎಲ್ಲಾ ಎಂಸಿಸಿ ವಾಹನ ಚಾಲಕರಿಗೆ ಇಂತಹ ಕ್ರಮಗಳಲ್ಲಿ ತೊಡಗಿಸದಂತೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆದೇಶ ನೀಡಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter