ಬಂಟ್ವಾಳ: 15ರಂದು ‘ಮಾನವ ಸರಪಳಿ’ ರಚನೆ ಕಾರ್ಯಕ್ರಮಕ್ಕೆ ಸಿದ್ಧತೆ
ಬಂಟ್ವಾಳ:ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಸೆ. 15ರಂದು ಬೆಳಗ್ಗೆ ನಡೆಯಲಿರುವ ತಾಲ್ಲೂಕು ಮಟ್ಟದ ‘ಮಾನವ ಸರಪಳಿ’ ರಚನೆ ಕಾರ್ಯಕ್ರಮದ ಪೂರ್ವಭಾವಿ ಸಭೆ ತಹಶೀಲ್ದಾರ್ ಅರ್ಚನಾ ಡಿ.ಭಟ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಇಲ್ಲಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಜೊತೆಗೆ ನಡೆದ ಸಭೆಯಲ್ಲಿ ಪರಸ್ಪರ ಸಮಾಲೋಚನೆ ನಡೆಸಿದರು.
ಫರಂಗಿಪೇಟೆ- ಮಿತ್ತೂರು ನಡುವೆ ಸುಮಾರು 21 ಕಿ.ಮೀ.ಗಳ ಅಂತರದಲ್ಲಿ ಮಾನವ ಸರಪಳಿ ರಚನೆಯಾಗಲಿದ್ದು, ಪ್ರತೀ ಕಿ.ಮೀ.ಗೆ 800 ಮಂದಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಫರಂಗಿಪೇಟೆಯಿಂದ ಬ್ರಹ್ಮರಕೂಟ್ಲು ತನಕ ಹೆದ್ದಾರಿ ಬದಿ ಗಿಡ ನೆಡಲು ಸ್ಥಳೀಯ ಪಿಡಿಒ ಗಳಿಗೆ ಸೂಚನ ನೀಡಲಾಗಿದ್ದು, ಮೆರವಣಿಗೆಯಲ್ಲಿ ಬ್ಯಾಂಕ್ ಸಿಬಂದಿ, ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಆಟೋ ಚಾಲಕರು ಸಹಿತ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಳ್ಳುವರು ಎಂದರು.
ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೆಶಕಿ ಸುನೀತಾ, ಕಂದಾಯ ನಿರೀಕ್ಷಕರಾದ ಜನಾರ್ದನ್ ಜೆ., ವಿಜಯ್ ಆರ್., ಪುರಸಭಾ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಇದ್ದರು.