ಕಾರಿಂಜ: ರೂ 70ಲಕ್ಷ ವೆಚ್ಚದ ಬ್ರಹ್ಮರಥ ಮೆರವಣಿಗೆ ಪಾರ್ವತೀ-ಪರಮೇಶ್ವರ ದೇವರಿಗೆ ಬೆಳ್ಳಿ ಪುಷ್ಪಕನ್ನಡಿ ಸಮರ್ಪಣೆ
ಬಂಟ್ವಾಳ:ಇಲ್ಲಿನ ಪುರಾಣ ಪ್ರಸಿದ್ಧ ಕಾರಿಂಜ ಶ್ರೀ ಮಹತೋಭಾರ ಪಾರ್ವತೀ-ಪರಮೇಶ್ವರ ದೇವಸ್ಥಾನಕ್ಕೆ ಕುಂಭಾಶಿ ವಿಶ್ವಕರ್ಮ ಶಿಲ್ಪಕಲಾ ಕೇಂದ್ರದಲ್ಲಿ ನಿಮರ್ಾಣಗೊಂಡ ರೂ 70ಲಕ್ಷ ವೆಚ್ಚದ ನೂತನ ಬ್ರಹ್ಮರಥ ಸಮರ್ಪಣಾ ಮೆರವಣಿಗೆ ಬುಧವಾರ ಸಂಜೆ ನಡೆಯಿತು.

ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನ ಬಳಿ ಆರ್ ಎಸ್ ಎಸ್ ಮುಖಂಡ ಡಾ.ಕೆ. ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ, ಉಪಾಧ್ಯಕ್ಷ ಪ್ರಶಾಂತ್, ಗ್ರಾಮಾಣಿಗಳಾದ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಸುಧಾಕರ ಆಚಾರ್ಯ, ರಕ್ತೇಶ್ವರಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಸಾಹಿತಿ ಕೆ.ಎನ್.ಆಚಾರ್ಯ, ಪ್ರಮುಖರಾದ ಕಾಡಬೆಟ್ಟು ಪ್ರಮೋದ್ ಕುಮಾರ್ ರೈ, ಮರಾಯಿಬೆಟ್ಟು ಶಾಂತಿಪ್ರಸಾದ್ ಜೈನ್, ಪ್ರವೀಣ ಪಡಂದರಬೆಟ್ಟು, ರಾಧಾಕೃಷ್ಣ ಅಡ್ಯಂತಾಯ, ರಾಜಾರಾಮ ನಾಯಕ್, ಸರಪಾಡಿ ಅಶೋಕ ಶೆಟ್ಟಿ, ರಮೇಶ ನಾಯಕ್, ಪ್ರಸಾದ್ ಕುಮಾರ್ ರೈ, ಬಿ.ದೇವದಾಸ ಶೆಟ್ಟಿ, ದಿನೇಶ ಅಮ್ಟೂರು, ರೊನಾಲ್ಡ್ ಡಿಸೋಜ, ಅರುಣ್ ರೋಶನ್ ಡಿಸೋಜ ಮತ್ತಿತರರು ಇದ್ದರು.
ಇದೇ ವೇಳೆ ಕಾಡಬೆಟ್ಟು ಕುಟುಂಬಿಕರಿಂದ ಪಾರ್ವತೀ-ಪರಮೇಶ್ವರ ದೇವರಿಗೆ ಬೆಳ್ಳಿ ಪುಷ್ಪಕನ್ನಡಿ ಮೆರವಣಿಗೆಯಲ್ಲಿ ಸಾಗಿಸಲಾಯಿತು. ಚೆಂಡೆ, ಬ್ಯಾಂಡ್, ವಾದ್ಯ ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.
39 ರಥ ಸಾಗಿಸಿದ ಚಾಲಕ: