ಉಳಾಯಿಬೆಟ್ಟು ಶ್ರೀ ಮಹಮಾಯಿ ಸ್ಪೋರ್ಟ್ಸ್ ಕ್ಲಬ್
ನೂತನ ಅಧ್ಯಕ್ಷರಾಗಿ ಹರೀಶ್ ಕಿನ್ನಿಬೆಟ್ಟು ಆಯ್ಕೆ
ಕೈಕಂಬ : ಉಳಾಯಿಬೆಟ್ಟು ಶ್ರೀ ಮಹಮಾಯಿ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷ ಶ್ರೀಧರ ತಲ್ಲಿಮಾರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ೨೦೨೪-೨೫ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕ್ಲಬ್‌ನ ಕಾರ್ಯದರ್ಶಿ ಚೇತನ್ ಗಾಣಿಗ ೨೦೨೩-೨೪ನೇ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಜಯಂತ ಕಾಂತಾರಬೆಟ್ಟು ಅವರು ವಾಚಿಸಿದ ವಾರ್ಷಿಕ ಲೆಕ್ಕಪತ್ರಕ್ಕೆ ಸರ್ವಾನುಮತದ ಅನುಮೋದನೆ ನೀಡಲಾಯಿತು.
೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಕಿನ್ನಿಬೆಟ್ಟು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು(ಗೌರವಾಧ್ಯಕ್ಷ), ಗಣೇಶ ಸಪಲಿಗ(ಉಪಾಧ್ಯಕ್ಷ), ದೀಕ್ಷಿತ್ ಕುಲಾಲ್(ಕಾರ್ಯದರ್ಶಿ), ಸಂತೋಷ್ ಸುವರ್ಣ ಪೆರ್ಮಂಕಿ(ಜೊತೆ ಕಾರ್ಯದರ್ಶಿ), ಅಶೋಕ್ ತಲ್ಲಿಮಾರ್(ಕೋಶಾಧಿಕಾರಿ), ದಿವಾಕರ ತಲ್ಲಿಮಾರ್, ಚಂದ್ರಶೇಖರ ತಲ್ಲಿಮಾರ್(ಕ್ರೀಡಾ ಕಾರ್ಯದರ್ಶಿಗಳು), ಯಾದವ ಮುಂಡಾಡಿ, ವಿಶ್ವನಾಥ ಅಂಚನ್ ಆಚೆಬೈಲು(ಸಾಂಸ್ಕೃತಿಕ ಕಾರ್ಯದರ್ಶಿಗಳು) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಮಲಾಕ್ಷ ತಲ್ಲಿಮಾರ್, ಹರಿಕೇಶ ಶೆಟ್ಟಿ ನಡಿಗುತ್ತು, ಪ್ರವೀಣ್ ತಲ್ಲಿಮಾರ್, ದಿನೇಶ್ ತಲ್ಲಿಮಾರ್, ಸುಕೇಶ್ ಕಾಂತಾರಬೆಟ್ಟು, ಜಯರಾಮ ರೈ, ಶ್ರೀಧರ ತಲ್ಲಿಮಾರ್ ಮತ್ತು ರಾಮ ಮುಂಡಾಡಿ ಅವರನ್ನು ಆಯ್ಕೆ ಮಾಡಲಾಯಿತು.