ಬಂಟ್ಚಾಳ: ಸುವರ್ಣ ಮಹೋತ್ಸವದ ಸಂಭ್ರಮ ಶ್ರೀ ಗಣಪತಿ ದೇವರಿಗೆ ಬೆಳ್ಳಿ ಹಾಗೂ ಚಿನ್ನಾಭರಣ ಸಮರ್ಪಣೆ
ಬಂಟ್ವಾಳ:ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ವಠಾರದಲ್ಲಿ ಶ್ರೀಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಸುವರ್ಣ ಮಹೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಶ್ರೀ ಗಣಪತಿ ದೇವರಿಗೆ ಬೆಳ್ಳಿ ಹಾಗೂ ಚಿನ್ನಾಭರಣವನ್ನು ಸಮರ್ಪಿಸಲಾಯಿತು.

ಗಣೇಶ ಚತುರ್ಥಿಯಂದು ಶ್ರೀ ಗಣಪತಿದೇವರ ಪ್ರತಿಷ್ಠಾಪನೆಯಾದ ಬಳಿಕದೇವಳದಆಡಳಿತಮೊಕ್ತೇಸರರು,ಮೊಕ್ತೇಸರರ ಹಾಗೂ ಭಗವದ್ಬಕ್ತರ ಸಮ್ಮುಖದಲ್ಲಿ
21 ಸ್ವರ್ಣ ಅಷ್ಟದಳ ಮಾಲೆ ಹಾಗೂ 2 ಬೆಳ್ಳಿಯ ಎಲೆ ಯನ್ನು ಸಮರ್ಪಿಸಲಾಯಿತು.

ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಸೆ.13 ರವರೆಗೆ ಏಳುದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಹವನಗಳು ನಢಯುತ್ತಿವೆ.