ಬಂಟ್ವಾಳ: ನೇಪಾಲದಲ್ಲಿ ಪಿಸಿಎ ಸ್ಪೋರ್ಟ್ಸ್ ಈವೆಂಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ನಡೆದ ಇಂಡೋ-ನೇಪಾಲ್ ಇಂಟರ್‌ನ್ಯಾಷನಲ್ ಇನ್ವಿಟೇಶನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ತ್ರೋಬಾಲ್ ಪಂದ್ಯಾಟದಲ್ಲಿ ಭಾರತ ಚಾಂಪಿಯನ್ ಪ್ರಶಸ್ತಿ ಪಡೆದಿದೆ.

ಭಾರತ ತಂಡವನ್ನು ಪ್ರತಿನಿಧಿಸಿದ್ದ ಬಂಟ್ವಾಳ ಚಂಡ್ತಿಮಾರಿನ ಸುಪ್ರಿಯಾ ಎಸ್.ಪಿ. ಅವರು “ಬೆಸ್ಟ್ ಪ್ಲೇಯರ್ ” ಬಹುಮಾನಕ್ಕೆ ಭಾಜನರಾಗಿದ್ದಾರೆ. ಅವರು ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಹಾಗೆಯೇ ಪುರುಷರ ತಂಡವನ್ನು ಚಂಡ್ತಿಮಾರಿನ ಪ್ರಜ್ವಲ್ ಎಸ್.ಪಿ, ರಕ್ಷಿತ್ ಆರ್. ಅವರು ಪ್ರತಿನಿಧಿಸಿದ್ದರು.

By Suddi9

Leave a Reply

Your email address will not be published. Required fields are marked *