ವಿವಿಧ ಶಾಲೆಗಳಿಗೆ ಕೊಡುಗೆ, ತಹಶೀಲ್ದಾರ್ ಮೆಚ್ಚುಗೆ
ಬಂಟ್ವಾಳ:ರೋಟರಿ ಕ್ಲಬ್ ಮತ್ತು ರೋಟರಿ ಆನ್ಸ್ ಸಂಘಟನೆಯು ರಕ್ತನಿಧಿಯಂತಹ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಪಂದಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ ಎಂದು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿ.ಸಿ.ರೋಡಿನಲ್ಲಿ ರೋಟರಿ ಆನ್ಸ್ ಕ್ಲಬ್ ವತಿಯಿಂದ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಿತ ವಿವಿಧ ಶಾಲೆಗಳಿಗೆ ಕೊಡುಗೆ ವಿತರಣೆ ಮತ್ತು ಅಂಗನವಾಡಿ ಶಿಕ್ಷಕಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಇದೇ ವೇಳೆ ಕ್ಲಬ್ಬಿನ ಮಾಜಿ ಅಧ್ಯಕ್ಷೆ ಭುವನಾ ಬಾಳಿಗಾ ಅವರು ನೂತನ ಅಧ್ಯಕ್ಷೆ ಭಾರತಿ ಬಿ.ಕುಂದರ್ ಇವರಿಗೆ ಅಧಿಕಾರ ಹಸ್ತಾಂತರಿಸಿದರು.
ಮಾಜಿ ಕಾರ್ಯದರ್ಶಿ ಪ್ರೇಮಾ ರಾವ್ ಅನಿಸಿಕೆ ವ್ಯಕ್ತ ಪಡಿಸಿದರು.
ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್, ಪ್ರಮುಖರಾದ ಪ್ರಕಾಶ್ ಬಾಳಿಗಾ, ಅಶ್ವನಿ ಕುಮಾರ್ ರೈ, ಎ.ರಾಮಣ್ಣ ರೈ, ಬೇಬಿ ಕುಂದರ್ ಮತ್ತಿತರರು ಇದ್ದರು.ವಾಣಿ ಪ್ರಕಾಶ ಕಾರಂತ್ ಸ್ವಾಗತಿಸಿ, ಕಾರ್ಯದರ್ಶಿ ಸಾವಿತ್ರಿ ಸೋಮಯಾಜಿ ವಂದಿಸಿದರು.