Published On: Wed, Aug 21st, 2024

ಪೂರ್ವಿಜರ ಆಚಾರ,ವಿಚಾರ, ಸಂಸ್ಕೃತಿಗಳನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಸಹಕಾರಿ: ಪದ್ಮರಾಜ್ ಆರ್ ಪೂಜಾರಿ

ಬಂಟ್ವಾಳ : ಕೆಸರು ಗದ್ದೆ ಕ್ರೀಡಾಕೂಟಗಳು ಕೇವಲ ಆಟಕ್ಕೆ ಸೀಮಿತವಾಗದೆ ನಮ್ಮ ಪೂರ್ವಿಜಕರ ಆಚಾರ ವಿಚಾರ, ಸಂಸ್ಕೃತಿಗಳನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಸಹಕಾರಿಯಾಗಿದೆ ಎಂದು ಕುದ್ರೋಳಿ ಗುರು ಬೆಳದಿಂಗಳು ಫೌಂಡೇಶನ್ (ರಿ)ನ ಅಧ್ಯಕ್ಷರಾದ ಪದ್ಮರಾಜ್ ಆರ್ ಪೂಜಾರಿ ಹೇಳಿದರು.ಅವರು ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ವತಿಯಿಂದ ನಡೆದ “ಕೆಸರ್ ದ ಕಂಡೋಡು ಗೊಬ್ಬುದ ಕೂಟ” ಕಾರ್ಯಕ್ರಮದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಬಂಟ್ವಾಳ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಯಶೋಧರ ಕರ್ಬೆಟ್ಟು ವಹಿಸಿದ್ದರು.
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್,ಬೀಡಿ ಉದ್ಯಮಿ ರಘು ಸಫಲ್ಯ, ಪಿಡಬ್ಲ್ಯೂ ಗುತ್ತಿಗೆದಾರರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ,ಉದ್ಯಮಿಗಳಾದ ಉಮೇಶ್ ನೆಲ್ಲಿಗುಡ್ಡೆ, ಚರಣ್ ಕುಮಾರ್, ದಕ್ಷಿಣ ಕನ್ನಡ ಫ್ಲವರ್ ಡೆಕೋರೇಷನ್ ಮಾಲಕರ ಅಸೋಸಿಯೇಷನ್ ಉಪಾಧ್ಯಕ್ಷ ಅನಿಲ್ ಕೊಟ್ಟಾರಿ, ಚೇತನ್ ಮೆಲ್ಕಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ರಾದ ಪುರುಷೋತ್ತಮ ಸಾಲಿಯಾನ್, ಡಾ. ಸುಬ್ರಹ್ಮಣ್ಯ ಮೊಗರ್ನಾಡು, ಪ್ರಸಾದ್ ಮರ್ದೋಳಿ, ಮಹಿಳಾ ಸಂಚಾಲಕಿ ನಳಿನಿ ಉಮೇಶ್, ಗೌರವ ಸಂಚಾಲಕಿ ಕಾವ್ಯಶ್ರೀ ನೆಲ್ಲಿಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು.


ಕೆಸರು ಗದ್ದೆಯಲ್ಲಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶೇಷ ಸ್ಪರ್ಧೆಯಾಗಿ ಕೆಸರಿನಲ್ಲಿ ನಡೆದ ಹಗ್ಗ ಜಗ್ಗಾಟದಲ್ಲಿ ಪ್ರಥಮ ಬಹುಮಾನವನ್ನು  ಜಾನಕಿ  ಕನ್ಸ್ಟಕ್ಷನ್ ಶೇಡಿಗುರಿ  ಹಾಗೂ ದ್ವಿತೀಯ ಬಹುಮಾನವನ್ನು ಮಿತ್ತಮಜ್ಜಲ್ ಫ್ರೆಂಡ್ಸ್ ಪಡೆದುಕೊಂಡರು.
ಕ್ರೀಡಾಕೂಟದ ತೀರ್ಪುಗಾರರಾಗಿ ಹರೀಶ್ ಅಂತರ, ವಿಶ್ವನಾಥ ಕೆ, ನಾಗರಾಜ್ ಸುಳ್ಯ, ಕ್ರೀಡಾಕೂಟದ ಸ್ಪರ್ಧ ನಿರೂಪಕರಾಗಿ ನವೀನ್ ಪುತ್ತೂರು, ಜಯರಾಜ್ ಕಾಂಚನ್ ಸಹಕರಿಸಿದರು.
ಓಂ ಶ್ರೀ ಗೆಳೆಯರ ಬಳಗ (ರಿ)   ನಾಯಿಲ ನರಿಕೊಂಬು ಅಧ್ಯಕ್ಷ ಕಿರಣ್  ಅಟ್ಲುರು ಸ್ವಾಗತಿಸಿ, ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter