ನವೋದಯ ಸ್ವ ಸಹಾಯ ಸಂಘಕ್ಕೆ ಚಾಲನೆ
ಬಂಟ್ವಾಳ: ತಾಲೂಕು ಬರಿಮಾರು ಗ್ರಾಮದ ಗಾಣದಪಾಲು ಎಂಬಲ್ಲಿ ಶ್ರೀ ಕಾನಲ್ತಾಯ ನವೋದಯ ಸ್ವ ಸಹಾಯ ಸಂಘಕ್ಕೆ ಚಾಲನೆ ನೀಡಲಾಯಿತು.
ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಕಲ್ಲಡ್ಕ ಶಾಖೆಯಲ್ಲಿ ಖಾತೆ ತೆರೆಯಲಾಯಿತು ಸಂಘದ ಅಧ್ಯಕ್ಷ , ಕಾರ್ಯದರ್ಶಿಯವರಿಗೆ ಬ್ಯಾಂಕಿನ ಶಾಖಾಧಿಕಾರಿ ಮೀನಾಕ್ಷಿ ನಿರ್ಣಯ ಪುಸ್ತಕ ಹಸ್ತತಂರಿಸಿದರು. ಈ ಸಂದರ್ಭದಲ್ಲಿ ನವೋದಯ ತಾಲೂಕು ಮೇಲ್ವಿಚಾರಕ ಉದಯ ಯಂ ಕಡೇಶಿವಾಲಯ ವಲಯ ಪ್ರೇರಕ ಸಂಜೀವ ಪೂಜಾರಿ ಉಪಸ್ಥಿತರಿದ್ದರು