ಪಿಲಿಂಗಾಲು: ಶ್ರೀ ಗುರು ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ
ಬಂಟ್ವಾಳ:ತಾಲೂಕಿನ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ 353 ನೇ ಆರಾಧನಾ ಮಹೋತ್ಸವ ಬುಧವಾರ ನಡೆಯಿತು.

ಗುರುವರ್ಯರ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಂತ್ರಾಕ್ಷತೆ ಸಹಿತ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಇದೇ ವೇಳೆ ಶ್ರೀ ಮಹಾಗಣಪತಿ ಮತ್ತು ಗಾಯತ್ರೀ ದೇವಿಗೆ ವಿಶೇಷ ಪೂಜೆ, ಭಜನೆ ನಡೆಯಿತು.
ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಪ್ರಮುಖರಾದ ಸಿ.ಅನಂತ ಪೈ ವಾಮದಪದವು, ಬಿ.ರಘು ಸಪಲ್ಯ ಪಾಣೆಮಂಗಳೂರು, ನಾಗೇಶ ಕಲ್ಲಡ್ಕ, ಎಂ.ಬೂಬ ಸಪಲ್ಯ ಮುಂಡಬೈಲು, ಕೆ.ಬಾಬು ಸಪಲ್ಯ ವಗ್ಗ, ಭಜನಾ ಸಮಿತಿ ಅಧ್ಯಕ್ಷ ಜಯ ಪೂಜಾರಿ, ಸತೀಶ ಸಪಲ್ಯ ಬಂಟ್ವಾಳ, ಮೋಹನ್ ಕೆ.ಶ್ರೀಯಾನ್ ರಾಯಿ, ಜಗದೀಶ ಕುಂದರ್, ಚಿದಾನಂದ ನಾಯ್ಕ್ ಪಿಲಿಂಗಾಲು,
ವೇದವ ಗಾಣಿಗ, ದಿನೇಶ ಬೋಳಂತೂರು ಮತ್ತಿತರರು ಪಾಲ್ಗೊಂಡಿದ್ದರು.