ದೇಶದ ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪಾಕ್ ಸಹೋದರಿಯ ಸಿದ್ಧತೆ
ದೇಶದಾದಂತ್ಯ ರಕ್ಷಾ ಬಂಧನ ಹಬ್ಬವನ್ನು ಎಲ್ಲಾ ಸಹೋದರ ಸಹೋದರಿಯರು ಬಹಳ ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಈ ಹಬ್ಬಕ್ಕೆ ಎರಡು ದಿನವಿರುವಾಗಲೇ ಪಾಕ್ ಮೂಲದ ಸಹೋದರಿಯಾದ ಕಮರ್ ಮೊಹ್ಸಿನ್ ಶೇಖ್ ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ.ಮೂಲತಃ ಪಾಕಿಸ್ತಾನದ ಕರಾಚಿಯವರಾದ ಕಮರ್ ಶೇಖ್ ಮೋದಿಯವರ ನೆಚ್ಚಿನ ಸಹೋದರಿಯರಲ್ಲಿ ಒಬ್ಬರಾಗಿದ್ದಾರೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಅಹಮದಾಬಾದ್ ನಿವಾಸಿ ಮೊಹಶೀನ್ ಶೇಖ್ ಅವರನ್ನು 1981 ರಲ್ಲಿ ವಿವಾಹವಾಗಿ ಆ ಬಳಿಕ ಗುಜರಾತ್‌ನ ಅಹಮದಾಬಾದ್‌ನಲ್ಲೇ ನೆಲೆಸಿದ್ದಾರೆ. ಕಳೆದ 29 ವರ್ಷಗಳಿಂದ ಮೋದಿಯವರಿಗೆ ರಾಖಿ ಕಟ್ಟುತ್ತಿರುವ ಕಮರ್ ಶೇಖ್, ಈ ಬಾರಿಯು ಪ್ರಧಾನಿಗೆ ರಾಖಿ ಕಟ್ಟುವ ಸಲುವಾಗಿ ಆಗಸ್ಟ್ 18 ರಂದು ದೆಹಲಿಗೆ ಬರಲಿದ್ದಾರೆ. ಆಗಸ್ಟ್ 19 ರ ರಕ್ಷಾ ಬಂಧನದಂದು 30 ನೇ ಬಾರಿ ಪ್ರಧಾನಿ ಮೋದಿ ಕೈಗೆ ರಾಖಿ ಕಟ್ಟಲಿದ್ದಾರೆ.
ಕಳೆದ 30 ವರ್ಷಗಳಿಂದ ಕಮರ್ ಶೇಖ್ ಅವರು ಪ್ರಧಾನಿ ಮೋದಿಯವರಿಗೆ ರಾಖಿ ಕಟ್ಟುತ್ತಿದ್ದಾರೆ. ಪ್ರತಿ ವರ್ಷ ತಮ್ಮ ಕೈಯಾರೆ ತಯಾರಿಸಿದ ರಾಖಿಯನ್ನು ಮೋದಿ ಕಟ್ಟುವುದು ವಿಶೇಷವಾಗಿದೆ. ಈ ಬಗ್ಗೆ ಮಾತನಾಡಿರುವ ಕಮರ್ ಶೇಖ್ ಅವರು, ‘ನಾನು ಮಾರುಕಟ್ಟೆಯಿಂದ ರಾಖಿಗಳನ್ನು ಖರೀದಿಸುವುದಿಲ್ಲ, ನಾನು ಪ್ರತಿ ವರ್ಷ ರಕ್ಷಾಬಂಧನದ ಮೊದಲು ನನ್ನ ಕೈಯಿಂದಲೇ ರಾಖಿಗಳನ್ನು ತಯಾರಿಸುತ್ತೇನೆ.
ಇದನ್ನೂ ಓದಿ: ಎಲೈಸಿ ಪ್ರತಿನಿಧಿಗಳ ಸಂಘದ ಪದಗ್ರಹಣ
30ನೇ ಬಾರಿ ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದೇನೆ. ಈ ವರ್ಷ ವೆಲ್ವೆಟ್ನಲ್ಲಿ ಮಾಡಿರುವ ರಾಖಿ ಕಟ್ಟುತ್ತೇನೆ. ಈ ರಾಖಿಯಲ್ಲಿ ಮುತ್ತುಗಳನ್ನು ಬಳಸಲಾಗುತ್ತದೆ. ರಕ್ಷಾಬಂಧನದ ಒಂದು ದಿನ ಮುಂಚಿತವಾಗಿ ಆಗಸ್ಟ್ 18 ರಂದು ರಾಖಿ ಕಟ್ಟುವುದಕ್ಕೆ ಹೋಗುವ ಸಲುವಾಗಿ ದೆಹಲಿಗೆ ಟಿಕೆಟ್ ಕಾಯ್ದಿರಿಸಲಾಗಿದೆ’ ಎಂದಿದ್ದಾರೆ.