ಬಂಟ್ವಾಳ: ಎಲೈಸಿ ಪ್ರತಿನಿಧಿಗಳ ಸಂಘದ ಪದಗ್ರಹಣ
ಬಂಟ್ವಾಳ: ದೇಶದಲ್ಲಿ ಸುಮಾರು ೫೦ಲಕ್ಷ ಕೋಟಿ ಆಸ್ತಿ ಹೊಂದಿರುವ ಭಾರತೀಯ ಜೀವ ವಿಮಾ ನಿಗಮ (ಎಲೈ ಸಿ) ಸಂಸ್ಥೆಯಲ್ಲಿ ಒಟ್ಟು ೧೩ ಲಕ್ಷ ಮಂದಿ ಪ್ರತಿನಿಧಿಗಳು ದುಡಿಯುತ್ತಿದ್ದು, ಸುಮಾರು ೧೯ ಕೋಟಿ ಪಾಲಿಸಿದಾರರ ಪೈಕಿ ವರ್ಷಕ್ಕೆ ರೂ ೪ ಲಕ್ಷ ಕೋಟಿ ಮೊತ್ತದ ಮೆಚ್ಯೂರಿಟಿ ಹಣ ವಿತರಣೆಯಾಗುತ್ತಿದೆ. ವಿಮಾ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ಹಿತರಕ್ಷಣೆಗಾಗಿ ಬಲಿಷ್ಟ ಸಂಘಟನೆ ಅಗತ್ಯವಿದೆ ಎಂದು ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ (ಲಿಕಾಯ್) ಇದರ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಎಲ್.ಮಂಜುನಾಥ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ (ಲಿಕಾಯ್) ಇದರ ವತಿಯಿಂದ ಶನಿವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಎಸ್.ಲೋಕೇಶ್ ಶೆಟ್ಟಿ, ಉಡುಪಿ ವಿಭಾಗ ಅಧ್ಯಕ್ಷ ಪ್ರಕಾಶ್ ರೈ ಸಾರಕೆರೆ, ಮಾಜಿ ಅಧ್ಯಕ್ಷ ಎಂ.ಶ್ರೀನಾಥ್ ಭಟ್, ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಚಿತ್ತರಂಜನ್ ನೆಕ್ಕಿಲಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಅಧ್ಯಕ್ಷ ಪ್ರಶಾಂತ ಕೋಟ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ ಇಂದ್ರ, ಕೋಶಾಧಿಕಾರಿ ಪ್ರಕಾಶ ಅಮ್ಟಾಡಿ, ಚಂದ್ರಶೇಖರ ಅಲ್ಲಿಪಾದೆ ಮತ್ತಿತರರು ಇದ್ದರು.
ಮಾಜಿ ಅಧ್ಯಕ್ಷ ಸ್ವಾಗತ: ರೋಹಿದಾಸ್ ಕುಂದರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಆನಂದ ಸಾಲ್ಯಾನ್ ವಂದಿಸಿದರು. ನವೀನ್ ಕೊಡ್ಮಾಣ್ ಮತ್ತು ನಾರಾಯಣ ಅಮೀನ್ ಕಾರ್ಯಕ್ರಮ ನಿರೂಪಿಸಿದರು.