ಕಲ್ಲಡ್ಕ ಕೊಳಕೀರ್ದ ತುಡಾರ್ ಆಶ್ರಯದಲ್ಲಿ ನಡೆದ ಕೆಸರ್ ಡೊಂಜಿ ದಿನ -24 ಹಾಗೂ ಸಾಧಕರಿಗೆ ಸನ್ಮಾನ
ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ “ಕೊಳಕೀರ್ದ ತುಡಾರ್” ಕೊಳಕೀರ್, ಕಲ್ಲಡ್ಕ ಇದರ ಆಶ್ರಯದಲ್ಲಿ “ಕೆಸರ್ ಡೊಂಜಿ ದಿನ- 2024 “ ಕಾರ್ಯಕ್ರಮ ಕೊಳಕೀರ್ ಬೈಲು ಅಡಿಕೊಳಕ್ಕೆ ಗದ್ದೆಯಲ್ಲಿ ನಡೆಯಿತು.
ಗ್ರಾಮದ ಹಿರಿಯರಾದ ರಮೇಶ್ ಪ್ರಭು ಅವರು ದೀಪ ಪ್ರಜ್ವಲಿಸಿ, ಹಿಂಗಾರ ಅರಳಿಸಿ ಉದ್ಘಾಟಿಸಿ ಹಿಂದಿನ ಕಾಲದಲ್ಲಿ ಕೆಸರು ನಮ್ಮ ಜೀವನವಾಗಿತ್ತು. ಅದನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳಕೀರ್ದ ತುಡಾರ್ ಅಧ್ಯಕ್ಷರಾದ ಶಿವಪ್ರಸಾದ್ ಕೊಟ್ಟಾರಿ ವಹಿಸಿದ್ದರು .
ಅತಿಥಿಯಾಗಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ದೈವ ನರ್ತಕ ಲೋಕಯ್ಯ ಸೇರಾ ಉಪನ್ಯಾಸಗೈದು ಮಾತನಾಡಿ ಮೂಲ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಶೇಖರ ಪಂಬದ ಸಜೀಪ ಇವರನ್ನು ಸನ್ಮಾನಿಸಲಾಯಿತು. ಸತತವಾಗಿ 43 ವರುಷಗಳಿಂದ ಶಬರಿಮಲೆ ಯಾತ್ರೆ ಕೈಯುತ್ತಿರುವ 103 ವಯಸ್ಸಿನ ಕಮಲ ಗುರುಸ್ವಾಮಿ, ದೈವನರ್ತಕ ರುಕ್ಮಯ ನಲಿಕೆ, ಲೈನ್ ಮ್ಯಾನ್ ವಸಂತ, ಪಂಪು ಚಾಲಕ ಕೊರಗಪ್ಪ ಕೊಟ್ಟಾರಿ, ದೈವ ಚಾಕರಿದಾರ ಪೂವಪ್ಪ ಮಡಿವಾಳ, ಸಾಧಕ ಶ್ರೀನಿಧಿ ಭಟ್ ಮೊದಲಾದವರನ್ನು ಗೌರವಿಸಲಾಯಿತು.
ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ ,ಪದ್ಮನಾಭ ಕೊಟ್ಟಾರಿ, ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ, ಭಂಡಾರ ಮನೆ ವಿಶ್ವನಾಥ್ ಆಳ್ವ, ದಂತ ವೈದ್ಯ ಡಾ. ಪ್ರಶಾಂತ್ ಕೊಳಕೀರು, ಬೊಂಡಲ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ ಕೊಟ್ಟಾರಿ, ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ನಾರಾಯಣ ನಾಯ್ಕ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ನರಸಿಂಹ ಮಡಿವಾಳ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಿಖಿತ ಆರ್. ಶೆಟ್ಟಿ, ಲೀಲಾವತಿ, ಜಾನ್ಸಿ ರಾಣಿ ಮಹಿಳಾ ಮಂಡಲದ ಅಧ್ಯಕ್ಷೆ ಮೀನಾಕ್ಷಿ ಆರ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಕೂಟದ ಗದ್ದೆಗೆ ಫಲ ಪುಷ್ಪ ಸಮರ್ಪಿಸಿ ಕೆಸರಿನಲ್ಲಿ ಮಕ್ಕಳು, ಮಹಿಳೆಯರು,ಪುರುಷರಿಗೆ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತಲ್ಲದೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು .
ನವ್ಯ ಪ್ರಶಾಂತ್ ಸ್ವಾಗತಿಸಿ, ನಿಧಿ ಪೃಥ್ವಿರಾಜ್ ಆಳ್ವ ವಂದಿಸಿದರು, ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.