Published On: Sat, Aug 17th, 2024

ಉಡುಪಿ : ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು

ವ್ಯಕ್ತಿಯೊಬ್ಬರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಆ ಬಳಿಕ ಹೊರಗಡೆ ಪಾರ್ಕ್‌ ಮಾಡಲಾಗಿದ್ದ ಕಾರ್‌ನಲ್ಲಿ ಮಲಗಿದ್ದ ಚಾಲಕನು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.ಚಿಕ್ಕಮಗಳೂರು ಮೂಲದ ಕಾರು ಚಾಲಕ ಆನಂದ (37) ಮೃತಪಟ್ಟವರು ಎನ್ನಲಾಗಿದೆ.

ಈ ಚಾಲಕನು ಕಾರಿನಲ್ಲಿ ಚಿಕಿತ್ಸೆಗೆಂದು ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದರು. ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದುಕೊಳ್ಳಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇರದ ಕಾರಣ ಹೊರಗಡೆ ಪಾರ್ಕ್‌ ಮಾಡಿದ್ದ ಕಾರಿನಲ್ಲಿಯೇ ಮಲಗಿದ್ದಾರೆ.

ಇದನ್ನೂ ಓದಿ: ನೋಡು ನೋಡುತ್ತಿದ್ದಂತೆ ಸಮುದ್ರ ಅಲೆಗೆ ಕೊಚ್ಚಿಕೊಂಡು ಹೋದ ಪ್ರವಾಸಿಗರು, ವಿಡಿಯೋ ಇಲ್ಲಿದೆ ನೋಡಿ

ಆದರೆ ಈ ವೇಳೆ ಕಾರಿನ ಗ್ಲಾಸನ್ನು ಸಂಪೂರ್ಣವಾಗಿ ಮುಚ್ಚಿ ಎಸಿ ಹಾಕಿ ಮಲಗಿಕೊಂಡಿದ್ದರ ಪರಿಣಾಮ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter