ಉಡುಪಿ: ನೋಡು ನೋಡುತ್ತಿದ್ದಂತೆ ಸಮುದ್ರ ಅಲೆಗೆ ಕೊಚ್ಚಿಕೊಂಡು ಹೋದ ಪ್ರವಾಸಿಗರು, ವಿಡಿಯೋ ಇಲ್ಲಿದೆ ನೋಡಿ

ಉಡುಪಿಯ ಕಡಲ ತೀರದಲ್ಲಿ ನೋಡು ನೋಡುತ್ತಿದ್ದಂತೆ ಪ್ರವಾಸಿಗರು ಕಡಲ ಅಲೆಗೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಉಡುಪಿಯ ಹೂಡೆ ಬಳಿಯ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಉಡುಪಿ ಹೂಡೆ ಬಳಿಯ ಕಡಲ ತೀರಕ್ಕೆ ಆಗಮಿಸಿದ್ದ ಪ್ರವಾಸಿಗರು ಮೋಜು ಮಸ್ತಿ ಮಾಡಿಕೊಂಡು ಸಮುದ್ರ ತೀರದಲ್ಲಿ ಈಜಾಟವಾಡುತ್ತಿದ್ದಾಗ ದೊಡ್ಡ ಅಲೆಯೊಂದು ಬಂದು ಕೊಚ್ಚಿಕೊಂಡು ಹೋಗಿದೆ.
ಪ್ರವಾಸಿಗರು ಉಡುಪಿಯ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ, ದೊಡ್ಡ ಅಲೆ ಬಂದಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಮುಳುಗಿ ಏಳುತ್ತಿದ್ದನ್ನು ಕಂಡು ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರಾದ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ನೇತೃತ್ವದಲ್ಲಿ ರಕ್ಷಣೆ ಕಾರ್ಯಚರಣೆ ನಡೆಸಲಾಗಿತ್ತು. ಪ್ರಾಣದ ಹಂಗು ತೊರೆದು ಸಮುದ್ರಕ್ಕೆ ಇಳಿದು ಪ್ರವಾಸಿಗನ ರಕ್ಷಣೆ ಮಾಡಿದ್ದಾರೆ.