ಮಳೆ ಹಾನಿ ಪ್ರದೇಶಕ್ಕೆ ತಡವಾಗಿ ಬಂದ ಹರೀಶ್ ಪೂಂಜಾ, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ ಹರೀಶ್ ಪೂಂಜಾಗೆ ಜನರು ತರಾಟೆ ತೆಗೆದುಕೊಂಡಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಶಾಸಕ ಪೂಂಜಾ ತಡವಾಗಿ ಭೇಟಿ ನೀಡಿದ್ದು ಶಾಸಕನಿಗೆ ಜನರಿಂದ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಸಕ ಹರೀಶ್ ಪೂಂಜ ತಮ್ಮ ಕ್ಷೇತ್ರದ ಜನರೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಾಸಕರು ಯಾಕೆ ತಡವಾಗಿ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ’ ಆ ತರ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದ ಹರೀಶ್ ಪೂಂಜ ಹೇಳಿದ್ದಾರೆ. ಜನರಿಗೆ ದೇವರ ಹೆಸರಿನಲ್ಲಿ ಜನರಿಗೆ ಬ್ಲಾಕ್ಮೇಲ್ ಮಾಡಿದ್ದಾರೆ. ಶಾಸಕ ಹರೀಶ್ ಪೂಂಜ ಅವರು ರೀತಿಯ ರ್ವತನೆಗೆ ಗ್ರಾಮದ ಜನರು ಕೆಂಡಾ ಮಂಡಲವಾಗಿದ್ದಾರೆ.
ಈ ಘಟನೆ ಬೆಳ್ತಂಗಡಿ ತಾಲೂಕಿನ ಸವಾಣಾಲಿನಲ್ಲಿ ನಡೆದಿದೆ. ತೀವ್ರ ಮಳೆ ಹಾನಿಯಾಗಿದ್ದರು ಶಾಸಕರು ಮಾತ್ರ ನಮ್ಮ ಊರಿಗೆ ಭೇಟಿ ನೀಡಿಲ್ಲ ಎಂದು ಜನರು ಆಕ್ರೋಶಗೊಂಡಿದ್ದಾರೆ. ಆದರೆ ಇದೀಗ ಮಳೆ ಕಡಿಮೆಯಾದ ಬಳಿಕ ಸವಾಣಾಲು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಿಂದ ಅನುಮತಿ
ಈ ವೇಳೆ ಶಾಸಕನನ್ನು ಅಲ್ಲಿನ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ಕೂಡ ಕೋಪಗೊಂಡು ಪ್ರಶ್ನೆ ಮಾಡಿದ್ರೆ ದೇವರಿಗೆ ಇಡುತ್ತೇನೆ ಎಂದು ಹೇಳಿದ್ದಾರೆ. ಇದರ ಜತೆಗೆ ಪ್ರಶ್ನೆ ಮಾಡಿದ ಜನರಿಗೆ ನಿಂದಿಸಿದ್ದಾರೆ. ಶಾಸಕರ ಈ ವರ್ತನೆಗೆ ಗ್ರಾಮಸ್ಥರು. ಇನ್ನಷ್ಟು ಕೆರಳಿದರು. ಪ್ರಶ್ನೆ ಮಾಡಿದವರಿಗೆ ನಾಯಿ ಎಂದು ಶಾಸಕರು ಅವಾಚ್ಯವಾಗಿ ನಿಂದಿಸಿದ್ದಾರೆ.
ಅನುದಾನ ಬೇಕಾದ್ರೆ ಇಡುತ್ತೇನೆ ಆದರೆ ಅಂತಹ *** ಮಕ್ಕಳನ್ನ ಕರೆದುಕೊಂಡು ಬಂದರೆ ಜಾಗ್ರತೆ ಎಂದ ಶಾಸಕರು ಹೇಳಿದ್ದಾರೆ. ಈ ಸಂದರ್ಭ ಜನರ ಕೂಡ ಆಕ್ರೋಶಗೊಂಡಿದ್ದಾರೆ. ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಜಟಾಪಟಿ ಮಾಡಿಕೊಂಡಿದ್ದಾರೆ. ನಂತರ ಶಾಸಕರು ಅಲ್ಲಿಂದ ತೆರಳಿದ್ದಾರೆ.