ಪಡೀಲ್ ಬೈಲ್ ಅಂಗನವಾಡಿ ಕೆಂದ್ರದಲ್ಲಿ ೭೮ ನೇ ಸ್ವಾತಂತ್ರೋತ್ಸವ
ಕೈಕಂಬ: ೭೮ನೇ ಸ್ವಾತಂತ್ರ‍್ಯ ದಿನಾಚರಣೆಯಂದು ಪಡೀಲ್ ಬೈಲ್ ಅಂಗನವಾಡಿ ಕೆಂದ್ರದಲ್ಲಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಶ್ರೀ ಧ್ವಜಾರೋಹಣ ನೇರವೇರಿಸಿದರು.

ಅಂಗನವಾಡಿ ಕಾರ್ಯಕರ್ತೆ ಸುಕನ್ಯಾ ಸ್ವಾಗತಿಸಿದರು. ಬಡಗಬೆಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ ಧನೂ ಪೂಜೆ ಶೌರ್ಯ ಘಟಕದ ಪ್ರತಿನಿಧಿಯಾದ ಜಗದೀಶ್ ಆಚಾರ್ಯ ಉಪಾನ್ಯಾಸಕರಾದ ದಿವಾಕರ್, ಶೌರ್ಯ ಘಟಕದ ಸಂಯೋಜಕಿ ಹಾಗೂ ಸದಸ್ಯರು ಹಿರಿಯ ನಾಗರಿಕರು , ಅಂಗನವಾಡಿ ಕಾರ್ಯಕರ್ತೆ ಸಹಾಯಕಿ, ಪುಟಾಣಿ ಮಕ್ಕಳು, ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಅಮಿತಾ, ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಸಿಹಿತಿಂಡಿಯನ್ನು ವಿತರಿಸಲಾಯಿತು.