ಪೊಳಲಿ ಸೇವಾ ಸಹಕಾರ ಸಂಘದಲ್ಲಿ ೭೮ ನೇ ಸ್ವಾತಂತ್ರೋತ್ಸವ
ಪೊಳಲಿ: ಕರಿಯಂಗಳ ಪೊಳಲಿ ಸೇವಾ ಸಹಕಾರ ಸಂಘದ ವತಿಯಿಂದ ೭೮ ನೇ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪೊಳಲಿ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ವೆಂಕಟೇಶ್ ನಾವಡ ಪೊಳಲಿ ದ್ವಜಾರೋಹಣಗೈದರು.
ಸಹಕಾರ ಸಂಘದ ನಿರ್ದೇಶಕರಾದ ಡಿ.ಎ ಅಬುಬಕ್ಕರ್ ಅಮುಂಜೆ,ಯಶವಂತ ಕೋಟ್ಯಾನ್, ನಿರಂಜನಿ ಚಂದ್ರಶೇಖರ ಶೆಟ್ಟಿ ಪೊಳಲಿ ಸೆವಾ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ವಿಜಯ ರವಿ ಫೆರ್ನಾಂಡಿಸ್, ಸಹಕಾರ ಸಂಘದ ಸಿಬ್ಬಂಧಿಗಳು ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು