ವಿದ್ಯಾಭಾರತಿ ವತಿಯಿಂದ ದ. ಕ. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ
ಬಂಟ್ವಾಳ: ವಿದ್ಯಾಭಾರತಿ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವು ಕಲ್ಲಡ್ಕಶ್ರೀರಾಮ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು.ಇದಕ್ಕು ಮೊದಲು ಶಾಲೆಯ ಮಧುಕರ ಸಭಾಂಗಣದಲ್ಲಿ ಪುತ್ತುಇರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಇವರು ದೀಪ ಪ್ರಜ್ವಲನ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟನೆಗೈದರು.

ನಂತರ ಮಾತಾನಾಡಿದ ಅವರು ಸೋಲಿನಲ್ಲಿ ಗೆಲುವನ್ನು ಕಾಣುವಾತ ನಿಜವಾದ ಕ್ರೀಡಾಪಟು, ಕ್ರೀಡಾಪಟುವಿನ ಗೆಲುವಿನ ದೃಷ್ಟಿಕೋನವು ತುಂಬಾ ಎತ್ತರದಲ್ಲಿರಬೇಕು ತಮ್ಮ ಕ್ರೀಡೆಯು ದೇಶವನ್ನು ಪ್ರತಿನಿಧಿಸುವ ಮನೋಭಾವವನ್ನು ಹೊಂದಿರಲಿ ಎಂದು ಶುಭ ಹಾರೈಸಿದರು.

ಮಾಣಿ ಬಾಲವಿಕಾಸ ವಿದ್ಯಾಸಂಸ್ಥೆಯಭಾಗವಹಿಸಿದ್ದರು. ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಖೇಲ್ ಕೂದ್ ಪ್ರಮುಖರಾದ ಕರುಣಾಕರ, ಸರಸ್ವತಿ ವಿದ್ಯಾಲಯ ಕಡಬ ಇದರ ಸಂಚಾಲಕರಾದ ವೆಂಕಟರಮಣ ರಾವ್ ಮಂಕುಡೆ, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾಗಿರುವ ರಮೇಶ್ ಎನ್, ಶ್ರೀರಾಮ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ್, ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಗೋಪಾಲ್ ಎಂ. ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಜಿಲ್ಲೆಯ ಬಾಲ, ಕಿಶೋರ, ತರುಣ ವರ್ಗಗಳು ಸೇರಿದಂತೆ ಬಾಲಕ ಬಾಲಕಿಯರ ಒಟ್ಟು ೪೬ ತಂಡಗಳು ಭಾಗವಹಿಸಿತ್ತು.ಗೋಪಾಲ್ ಶ್ರೀಮಾನ್ ಸ್ವಾಗತಿಸಿ, ಕು. ದೀಕ್ಷಿತಾ ಮಾತಾಜಿ ವಂದಿಸಿದರು. ಜಿನ್ನಪ್ಪ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು,



