ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಡ ಶಾಲೆಯ “ಆಟಿದೊಂಜಿ ದಿನ” ಕಾರ್ಯಕ್ರಮ
ಬಂಟ್ವಾಳ: ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಡ ಶಾಲೆಯ ನೇತ್ರಾವತಿ ತುಳು ಸಂಘದ ನೇತೃತ್ವದಲ್ಲಿ “ಆಟಿದೊಂಜಿ ದಿನ” ಕಾರ್ಯಕ್ರಮ ನಡೆಯಿತು.

ಬಾಳ್ತಿಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ,ಹಾಲಿ ಸದಸ್ಯ ವಿಠಲ ನಾಯ್ಕಾವರು ಸಂಪನ್ಮೂಲ ವ್ಯಕ್ತಿಯಾಗಿಭಾಗವಹಿಸಿ, ಆಟಿ ತಿಂಗಳ ವಿಶೇಷ ಆಚರಣೆ ಮತ್ತು ಮಹತ್ವವನ್ನು ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶಿವಪ್ಪ ನಾಯಕ ಸ್ವಾಗತಿಸಿದರು. ಶಿಕ್ಷಕಿ ಸುಧಾ ನಾಗೇಶ್ ಪ್ರಸ್ತಾವನೆಗೈದರು. ವಿಶ್ರಾಂತ ಮುಖ್ಯೋಪಾಧ್ಯಾಯರಾದ ಭೋಜ , ಶಾಲಾ ನಾಯಕ ಮನ್ವಿತ್ ಸಿ. ಪೂಜಾರಿ ಉಪಸ್ಥಿತರಿದ್ದರು. ಅಧ್ಯಾಪಕರಾದ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಕುಮಾರ್ ವಂದಿಸಿದರು.