Published On: Wed, Aug 14th, 2024

ಕಲ್ಲಡ್ಕ ರೈ. ಸೇ.ಸ.ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರಶಸ್ತಿ

ಬಂಟ್ವಾಳ:ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘವು ೨೦೨೩-೨೦೨೪ ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿ ಮತ್ತು ಸಾಧನೆಯನ್ನು ಪರಿಗಣಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬೇಂಕು ಲಿ.ಸಂಸ್ಥೆ ೨೦೨೩-೨೦೨೪ ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ  ಪ್ರಶಸ್ತಿಯನ್ನು ಪಡೆದಿರುತ್ತದೆ.  ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲ್ ಅವರು ದ.ಕ.ಜಿಲ್ಲಾಕೇಂದ್ರ ಸಹಕಾರ ಬೇಂಕಿನ ಅಧ್ಯಕ್ಷರಾದ ಡಾ. ಎಂ.ಎನ್.ರಾಜೇಂದ್ರಕುಮಾರ್  ಅವರಿಂದ ಸ್ವೀಕರಿಸಿದರು.

ಈ ಸಂದರ್ಭ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಜಾರಾಮ ಭಟ್ ಟಿ.ಜಿ ಹಾಗೂ ಇತರ ನಿರ್ದೇಶಕರು ಉಪಸ್ಥಿತರಿದ್ದರು.

 ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು ೨೦೨೩-೨೪ ನೇ ಸಾಲಿನಲ್ಲಿ   ರೂ.೪೫೪ ಕೋಟಿ ವ್ಯವಹಾರ ನಡೆಸಿ, ರೂ ೧,೫೩,೫೬,೦೧೫.೮೮ ಲಾಭಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಹೊಂದಿರುತ್ತದೆ.  ಸಂಘವು ರೂ.೬೧ ಕೋಟಿ  ಠೇವಣಿ ಸಂಗ್ರಹಿಸಿ, ತನ್ನ ಸದಸ್ಯರಿಗೆ ೬೯,೧೬,೫೪,೫೨೨ ರೂ. ಸಾಲವನ್ನು ವಿತರಿಸಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ .

ಸಂಘದಉತ್ತಮ ಪ್ರಗತಿ ಹಾಗೂ ಸಾಧನೆಗಾಗಿ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬೇಂಕು ಕಳೆದ ೯ ವರ್ಷಗಳಿಂದ ಉತ್ತಮ ಪ್ರಗತಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಸಹಕಾರ ಸಂಘವೆಂದು ಗುರುತಿಸಿ ಸನ್ಮಾನ, ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಗೌರವಿಸಿದೆ.   

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter