ಮಂಗಳೂರು: ಭಾರತದಲ್ಲಿ ಅಲ್ಪಸಂಖ್ಯಾತರು ಭಯವಿಲ್ಲದೆ ಬದುಕುತ್ತಿದ್ದಾರೆ, ಆದರೆ ಅಲ್ಲಿ ಹಿಂದೂಗಳು…. ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಳವಳ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧ ಪಟ್ಟಂತೆ ವಿವಿಧ ಮಠಗಳ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ. ಇದೀಗ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನರಮೇಧ ದಿಗ್ಭ್ರಮೆ ಉಂಟು ಮಾಡಿದೆ. ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಬದುಕುತ್ತಾರೆ. ಅದೇ ಪ್ರಪಂಚದ ಬೇರೆ ಕಡೆ ಹಿಂದೂ ಗಳ ಪರಿಸ್ಥಿತಿ ಅತ್ಯಂತ ಭಯಾನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹಿಂದೂ ದೇವಸ್ಥಾನಗಳ ಲೂಟಿ, ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಿಷ್ಕರುಣ ರೀತಿಯಿಂದ ವರ್ತಿಸಲಾಗುತ್ತಿದೆ.ಇದನ್ನು ನೋಡಿ ತುಂಬಾ ನೋವು, ಆಶ್ಚರ್ಯ ಆಗಿದೆ. ಮನುಷ್ಯರಿಗೆ ಇಂತಹ ಮನಸ್ಸು ಇರುತ್ತದೆಯೇ. ಈ ಕ್ರೌರ್ಯದ ಪರಾಕಾಷ್ಠೆಯಿಂದ ನಮ್ಮ ಹಿಂದೂಗಳು ಬದುಕುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ಹೊರಹಾಕಿದ್ದಾರೆ.
ಇದನ್ನೂ ಓದಿ : ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಿ , ನರಹತ್ಯೆಗೆ ದಿಕ್ಕಾರ, ಹಿಂದುಗಳೇ ಸಂಘಟಿತರಾಗಿ – ಡಾ. ಪ್ರಭಾಕರ ಭಟ್
ವಿಡಿಯೋ ಇಲ್ಲಿದೆ
ಅಲ್ಲಿರುವ ಹಿಂದೂಗಳಿಗೆ ಬಲವಾದ ಆಶ್ರಯ ಕೊಡಬೇಕು. ಹೊಸ ಅಧ್ಯಕ್ಷರು ಅಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಬೇಕು. ಭಾರತ ಸರ್ಕಾರವು ಸಹ ಈ ಬಗ್ಗೆ ಒತ್ತಾಯ ಮಾಡಬೇಕು. ಇನ್ನು ಹೆಚ್ಚಿನ ದುರಂತ ನಡೆಯುವ ಮೊದಲು ಅಲ್ಪಸಂಖ್ಯಾತರ ರಕ್ಷಣೆ ಮಾಡಬೇಕು. ಅಲ್ಪಸಂಖ್ಯಾತರ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ವಿಶ್ವಸಂಸ್ಥೆ, ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಿಂದೂಗಳ ರಕ್ಷಣೆಗೆ ಕಟಿಬದ್ದರಾಗಬೇಕು ಎಂದು ಒತ್ತಾಯಿಸಿದ್ದಾರೆ.