Published On: Tue, Aug 13th, 2024

ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಿ , ನರಹತ್ಯೆಗೆ ದಿಕ್ಕಾರ, ಹಿಂದುಗಳೇ ಸಂಘಟಿತರಾಗಿ – ಡಾ. ಪ್ರಭಾಕರ ಭಟ್

ಬಂಟ್ವಾಳ: ಬಾಂಗ್ಲಾದೇಶದಲ್ಲಿ ಉದೇಶಪೂರ್ವಕವಾಗಿ  ನರಹತ್ಯೆ ನಡೆಯುತ್ತಿದೆ.  ಹಿಂದುಗಳ ವಿರುದ್ಧ ಪ್ರತಿಕಾರ ನಡೆಯುತ್ತಿದೆ . ಇದು ಅತ್ಯಂತ ದುಃಖದ ಸಂಗತಿ. ಹೆಣ್ಣು ಮಕ್ಕಳನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗುತ್ತಿದೆ.   ಹಿಂದುಗಳನ್ನು ಕೊಂದು  ವಿಕೃತಿಯನ್ನು ಮೆರೆಯುತಿದ್ದಾರೆ. ಭಾರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ನರಹತ್ಯೆಯನ್ನು ಖಂಡಿಸುವುದು ಮಾತ್ರವಲ್ಲ  ಹಿಂದುಗಳಿಗೆ ಸೂಕ್ತ ರಕ್ಷಣೆಯೊಂದಿಗೆ ಬೆಂಬಲ ನೀಡಬೇಕಾಗಿದೆ ಎಂದು ಡಾ.ಪ್ರಭಾಕರ ಭಟ್ ಕಲ್ಲಡ್ಕ  ಗುಡುಗಿದರು. 

ಬಿ.ಸಿ.ರೋಡಿನಲ್ಲಿಸೋಮವಾರಹಿಂದು ಹಿತರಕ್ಷಣಾ ಸಮಿತಿ, ವಿಶ್ವ ಹಿಂದು ಪರಿಷದ್ ಸಹಿತ ಪರಿವಾರ ಸಂಘಟನೆಗಳಿಂದ ಬಿ.ಸಿ.ರೋಡಿನಲ್ಲಿ ಮಾನವ ಸರಪಳಿ ರಚನೆ ನಡೆಸಿ ಬಳಿಕಪ್ರತಿಭಟನಾ  ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಾಂಗ್ಲಾದೇಶದಲ್ಲಿ  ಈಗ ಕೇವಲ ೮% ಹಿಂದುಗಳು ಉಳಿದಿದ್ದಾರೆ. ಅವರ ಬೆಂಬಲಕ್ಕೆ ಯಾರೂ ಇಲ್ಲ ಹಿಂದುಗಳಿಗೆ ಅನ್ಯಾಯ ಮಾಡಿದಾಗ ವಿಪಕ್ಷ ಪಕ್ಷಗಳು ಮೌನವಾಗಿವೆ.  ಅದೇ ಪರಿಸ್ಥಿತಿ ಭಾರತದಲ್ಲಿಯೂ ನಿರ್ಮಾಣವಾಗುತ್ತಿದೆ. ಹಿಂದುಗಳನ್ನು ಸರ್ವನಾಶ ಮಾಡುವ ಪ್ರಯತ್ನ ನಿರಂತರ ನಡೆಯುತ್ತಿದೆ. ಹಿಂದುಗಳಿಗೆ ಬದುಕುವ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದ ಅವರು  ಜಾತಿ, ಪಕ್ಷ, ಭಾಷೆ ಹೆಸರಿನಲ್ಲಿ ಅಸಂಘಟಿತರಾಗಿರುವ  ಹಿಂದುಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇತ್ತೀಚೆಗೆ ಮಸೀದಿಯ ಎದುರುಗಡೆ  ವಿಜಯೋತ್ಸವದ ಮೆರವಣಿಗೆಯಲ್ಲಿ ಭಾರತ್ ಮಾತಕೀ ಜೈ ಎಂದು ಘೋಷಿಸಿದವರು ಮುಸಲ್ಮಾನರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಸ್ಥಳೀಯ ಶಾಸಕರಾಗಲಿ, ಸಚಿವರಾಗಲಿ ಆಸ್ಪತ್ರೆಗೆ ಭೇಟಿ ನೀಡಲಿಲ್ಲಎಂದು ಇತ್ತೀಚೆಗೆ ಬಂಟ್ವಾಳ ತಾಲೂಕಿನ ಬೋಳಿಯಾರ್‌ನಲ್ಲಿ ನಡೆದ ಘಟನೆಯನ್ನು ಉದಾಃರಿಸಿದರು. 

ರವಿ ಅಸೈಗೋಳಿ ಪ್ರಾಸ್ತಾವಿಕವಾಗಿ  ಮಾತನಾಡಿ ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ, ನಿರಂತರ ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿದರು.  ಭಯಾನಕ ರೀತಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹತ್ಯೆ ಮಾಡಲಾಗುತ್ತಿದೆ.  ಅತ್ಯಾಚಾರ ನಡೆಯುತ್ತಿದೆ. ಭಾರತೀಯರೆಲ್ಲ ಬಾಂಗ್ಲಾದೇಶದ ಹಿಂದುಗಳಿಗೆ ಬೆಂಬಲವಾಗಿ ನಿಲ್ಲಬೇಕು.  ಎಂದ ಅವರು. ಬಾಂಗ್ಲಾ ಸರಕಾರವು  ಅಲ್ಲಿನ ಹಿಂದುಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ನಾಶ ಮಾಡಿರುವ ಮನೆ  ಹಾಗೂ ದೇವಾಯಲಗಳನ್ನು ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು. 

ಹಿಂದು ಹಿತರಕ್ಷಣ ಸಮಿತಿ ವತಿಯಿಂದ   ಸಹಸ್ರಾರು ಹಿಂದುಗಳು ಸೇರಿ ಮಾನವ ಸರಪಳಿಯನ್ನು ರಚಿಸಿ ಪ್ರತಿಭಟಿಸಿ ಘೋಷಣೆಗಳನ್ನು ಕೂಗಿದರು. ಹಿಂದುಗಳ ಹತ್ಯಾಕಾಂಡ ಅಂದು ೧೯೪೭ ರಲ್ಲಿ ಪಾಕಿಸ್ಥಾನದಲ್ಲಿ  ಇಂದು ಬಾಂಗ್ಲಾದೇಶದಲ್ಲಿ , ಬಾಂಗ್ಲಾದ ಹಿಂದುಗಳಿಗೆ ಮಾನವ ಹಕ್ಕು ಇಲ್ಲವೇ, ದೇಶವಿಭಜನೆ ಬೇಕಿರಲಿಲ್ಲ ಬಾಂಗ್ಲಾ ಹಿಂದುಗಳಿಗಿAದು ರಕ್ಷಣೆ ಇಲ್ಲ, ಕೇರಳ-ಕಾಶ್ಮೀರ-ಬಂಗಾಳ ಇನ್ನು ಕರ್ನಾಟಕ ದೂರವಿಲ್ಲ,  ಎದ್ದೇಳು ಹಿಂದು ಚಿರ ನಿದ್ರೆ ಸಾಕು, ದುಷ್ಟಶಕ್ತಿ ಮೆರೆದಿದೆ ಎದ್ದೇಳು ಹಿಂದುವೇ ಮೊದಲಾದ ಘೋಷಣೆಗಳ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು. 

 ಹಿಂದು  ಹಿತರಕ್ಷಣ ಸಮಿತಿಯ ಪ್ರಮುಖರಾದ ಕೆ. ಪದ್ಮನಾಭ ಕೊಟ್ಟಾರಿ, ಪ್ರಸಾದ್ ಕುಮಾರ್ ರೈ,      ಕ. ಕೃಷ್ಣಪ್ಪ , ಸುಜಿತ್ ಕಲ್ಲಡ್ಕ , ರತ್ನಾಕರ ಶೆಟ್ಟಿ, ಡಾ. ಕಮಲಾ ಪ್ರಭಾಕರ್ ಭಟ್ , ಸುಲೋಚನಾ ಜಿ.ಕೆ. ಭಟ್, ಸಚಿನ್ ಮೆಲ್ಕಾರ್, ಚೇತನ್ ಕಡೇಶ್ವಾಲ್ಯ, ಸನತ್ ಕುಮಾರ್ ಅನಂತಾಡಿ, ಸದಾಶಿವ ಬರಿಮಾರು,  ಅಶೋಕ್ ಶೆಟ್ಟಿ ಸರಪಾಡಿ, ಚೆನ್ನಪ್ಪ ಕೋಟ್ಯಾನ್,ದೇವಪ್ಪ ಪೂಜಾರಿ,  ಸುಧಾಕರ ಶೆಟ್ಟಿ, ಕೇಶವ ದೈಪಲ, ಜನಾರ್ದನ ಬೊಂಡಾಲ, ಸಾಂತಪ್ಪ ಪೂಜಾರಿ, ರವೀಂದ್ರ ಕಂಬಳಿ , ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಕಮಲಾಕ್ಷ ಶಂಭೂರು , ರಶ್ಮಿತ್ ಶೆಟ್ಟಿ, ರಾಜಾರಾಮ್ ನಾಯಕ್, ಪುರುಷೋತ್ತಮ ಸಾಲಿಯಾನ್ , ತನಿಯಪ್ಪ ಗೌಡ, ಹರೀಶ್ ಪೆರಾಜೆ,ನರಸಿಂಹ ಮಾಣಿ, ರಮೇಶ್ ರಾವ್ ಮಂಚಿ, ಸನತ್ ಕುಮಾರ್ ಅನಂತಾಡಿ ಮೊದಲಾದ  ಸಂಘ ಪರಿವಾರದ ಹಲವು ಪ್ರಮುಖರು ಭಾಗವಹಿಸಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter