ಬಂಟ್ವಾಳ: ಕರಿಯಂಗಳ ಜನರಿಗೆ ಕಿರುಕುಳ ನೀಡುತ್ತಿರುವ ಉಸ್ಮಾನ್, ಮಗನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಒಂದು ಗ್ರಾಮದಲ್ಲಿ ಅಥವಾ ರಾಜ್ಯದಲ್ಲಿ, ದೇಶದಲ್ಲಿ ಜನರು ಶಾಂತಿ ನೆಮ್ಮದಿಯಿಂದ ಬದುಕಬೇಕಾದರೆ, ಅಲ್ಲಿನ ಪ್ರತಿಯೊಂದು ಧರ್ಮ, ಜಾತಿ ಎಲ್ಲರೂ ಕೂಡ ಒಗ್ಗೂಟಿನಿಂದ, ವಿಶ್ವಾಸದಿಂದ ಬದುಕ ಬೇಕು. ಆದರೆ ಅಲ್ಲಿ ಒಬ್ಬ ಜಾತಿ ಧರ್ಮದ ವಿಷ ಬೀಜ ಬಿತ್ತಿದರೆ, ಆ ಗ್ರಾಮದ ನೆಮ್ಮದಿ ಕೆಟ್ಟೋಗುತ್ತದೆ. ಇದೀಗ ಇಂತಹದೇ ಸನ್ನಿವೇಶ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ನಡೆದಿದೆ. ಆತ ಮಾಡಿದ ಒಂದು ಅಕ್ರಮ ಕೆಲಸದಿಂದ ಜಾತಿ, ಧರ್ಮ, ಭೇದ ಮರೆತು ಸೌಹಾರ್ದಯುತವಾಗಿ ಜೀವನ ನಡೆಸುತ್ತಿರುವ ಈ ಪ್ರದೇಶ ಜನರ ಭಾವನೆಗೆ ಧಕ್ಕೆ ತಂದಿದ್ದಾನೆ.
ಇದನ್ನೂ ಓದಿ: ಮಂಗಳೂರು: ಹಳೆ ದ್ವೇಷಕ್ಕೆ ರೌಡಿಶೀಟರ್ ಸಮೀರ್ನನ್ನು ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಕರಿಯಂಗಳ ಗ್ರಾಮದ ಉಸ್ಮಾನ್ ಎಂಬ ಮುಸ್ಲಿಂ ವ್ಯಕ್ತಿ ಪಂಚಾಯತ್ ಹಾಗೂ ತಾಲೂಕಿನ ಅನುಮತಿ ಪಡೆಯದೇ, ತನ್ನ ಜಮೀನಿನಲ್ಲಿರುವ ಹಳೇ ಮನೆಯಲ್ಲಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿದ್ದು, ತನ್ನ ಜಾನುವಾರುಗಳನ್ನು ಆಸು-ಪಾಸಿನವರ ಕೃಷಿಕರ ಗದ್ದೆಗಳಿಗೆ ಬಿಟ್ಟು ಮೇಯಿಸುತ್ತಿದ್ದ ಎಂದು ಹೇಳಲಾಗಿದೆ. ಜತೆಗೆ ಅಲ್ಲಿನ ಜನರಿಗೆ ಕಿರುಕುಳ ನೀಡುವುದು ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಅವನ ವಿರುದ್ಧ ಮಾತನಾಡಿದ ಜನರ ಮೇಲೆ ಸುಳ್ಳು ಕೇಸ್ಗಳನ್ನು ಹಾಕಿ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದ ಎಂದು ಹೇಳಲಾಗಿದೆ.

ಇನ್ನು ಈತನ ಮಗ ತಶ್ರೀಫ್ ಯಾನೆ ಮೋನು ಬಡ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ. ತಂದೆ -ಮಗನ ಮೇಲೆ ಪ್ರಕರಣ ದಾಖಲಿಸಿದರೂ, ಅವರ ಅಟ್ಟಹಾಸ ಮುಂದುವರಿದಿದೆ ಎಂದು ಹೇಳಲಾಗಿದೆ. ಇದರಿಂದ ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಇದೀಗ ಈ ಬಗ್ಗೆ ಅಲ್ಲಿನ ಸರ್ವಾಜನಿಕರು ಸ್ಥಳೀಯ ಗ್ರಾಮ ಪಂಚಾಯತ್ನ ಉಪ ಅದೀಕ್ಷಕರು, ಬಂಟ್ವಾಳ ಗ್ರಾಮಾoತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಾವುದೇ ತಂಟೆ ತಕರಾರಿಲ್ಲದೆ ಜಾತಿ ಧರ್ಮ ಭೇದ ಮರೆತು ಸೌಹಾರ್ದಯುತವಾಗಿ ನೂರಾರು ವರುಷಗಳಿಂದ ಜೀವನ ನಡೆಸುತ್ತಿರುವ ಕರಿಯಂಗಳ ಪರಿಸರದಲ್ಲಿ ಶಾಂತಿಯನ್ನು ಕದಡುವ ಈ ವ್ಯಕ್ತಿಗಳಿಂದ ತಮಗೆ ಸೂಕ್ತ ರಕ್ಷಣೆ ಮತ್ತು ಊರಿನ ಸ್ವಾಸ್ತ್ಯ ಕಾಪಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
