Published On: Tue, Aug 13th, 2024

ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿ ವೃದ್ಧಿ ಸಂಘದ ಮಹಾಸಭೆ 

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 2023-24 ನೇ ಸಾಲಿನ ಮಹಾಸಭೆ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಲಾಲ್ ಬಿ ನಾವೂರು ಅವರು‌ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಹಿರಿಯರ ಸಂಘಟನೆ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತದೆ ಅವರ ಜೀವನಾನುಭಾವ ನಮಗೆ ದಾರಿ ದೀಪ. ಅವರ ಸಮಾಯೋಚಿತ ಮಾರ್ಗದರ್ಶನವಿದ್ದಾಗ ಮಾತ್ರ ಯಶಸ್ವಿ ಜೀವನನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಇನ್ನೊರ್ವ ಅತಿಥಿ ಕರ್ನಾಟಕ ರಾಜ್ಯ ಕುಲಾಲ ಕುಲಾಲ,ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ನಿತೀಶ್ ಪಲ್ಲಿಕಂಡ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 72ವರ್ಷ ತುಂಬಿದ ಸದಸ್ಯರಾದ ಸೋಮಯ ಹನೈನಡೆ,  ರೋಹಿಣಿ ಪಾಂಗಾಳ, ಭಾಸ್ಕರ್ ಬಿ.ಸಿ. ರೋಡ್, ಸುಂದರ ಮೂಲ್ಯ ಕೊಂಗ್ರಬೆಟ್ಟು, ತಿಮ್ಮಪ್ಪ ಮೂಲ್ಯ ಅಲ್ಲಿಪಾದೆ, ಜಾನಕಿ ನಾರಾಯಣ ಗೂಡಿನಬಳಿ, ವಿಠ್ಠಲ ಮೂಲ್ಯ ಜಕ್ರಿಬೆಟ್ಟು, ಚಿನ್ನಯ ಸಾಲಿಯಾನ್ ಚೇಳೂರು,  ರತ್ನಾವತಿ ಬಿ.ಸಿ ರೋಡ್,  ಮಾಲತಿ ಚಂದಪ್ಪ ಉಪ್ಪಿನಂಗಡಿ, ವಿಶ್ವನಾಥ ಮರ್ದೋಳಿ, ಚಂದಪ್ಪ ಬಂಜನ್ ಮಿತ್ತಬೈಲ್, ಎ. ಶಿವಪ್ಪ ಕೊಡಂಗೆ, ದಿನಕರ ಪೂಂಜರಕೋಡಿ, ಸುಂದರ ಮೂಲ್ಯ ಸೌತೆಹಳ್ಳಿ, ನಾರಾಯಣ ಸಾಲಿಯಾನ್ ಕೇಳ್ದೋಡಿ, ವಿಶ್ವನಾಥ ಬಂಗೇರ ಅಲ್ಲಿಪಾದೆ, ಜಯಂತಿ ಸುಲ್ತಾನ್ ಕಟ್ಟೆ ನಾವೂರು, ಶ್ರೀನಿವಾಸ ಸಿದ್ದಕಟ್ಟೆ ಹಾಗೂ ಎಸ್. ಎಸ್. ಎಲ್ .ಸಿ ಯಲ್ಲಿ 604 ಗಳಿಸಿದ ಕು. ಕೃತಿ, ಮತ್ತು  ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಲಾಲ್ ಬಿ. ನಾವೂರು ಹಾಗೂ ರೋಟರಿ ಕ್ಲಬ್ ಬಿ.ಸಿ. ರೋಡ್ ಸಿಟಿ ಅಧ್ಯಕ್ಷ, ಸಂಘದ ಗೌರವಾಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಮತ್ತು ಭಾರತಿ ಶೇಷಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು.


ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಸಾಲಿಯಾನ್, ಶಾಂಭವಿ ಹನೈನಡೆ,  ರೋಹಿಣಿ,  ರತ್ನಾವತಿ,ದಿನಕರ ಪೂಂಜರಕೋಡಿ, ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ,ಜೊತೆ ಕಾರ್ಯದರ್ಶಿ ಶ್ರೀನಿವಾಸ ಸಜಿಪ ಸನ್ಮಾನಿತರ ಸನ್ಮಾನಪತ್ರ ವಾಚಿಸಿದರು. ಮಾಡಿದರು.ಸಂಘದ ಅಧ್ಯಕ್ಷರಾದ ಸೋಮಯ ಹನೈನಡೆ ಮಾತನಾಡಿದರು.  ಸನ್ಮಾನಿತರ ಪೈಕಿ ಎ ಶಿವಪ್ಪ ಕೊಡಂಗೆ, ದಿನಕರ ಪೂಂಜರ ಕೊಡಿ, ಸುಂದರ ಮೂಲ್ಯ ಕೊಂಗ್ರಬೆಟ್ಟು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಾರಾಯಣ ಮಾಸ್ಟರ್ ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಸಂಘದ ಗೌರವಾಧ್ಯಕ್ಷರಾದ ಶೇಷಪ್ಪ ಮಾಸ್ಟರ್ ಪ್ರಸ್ತಾವಿಸಿ,ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯ ದ ಬಗ್ಗೆ ಮಾಹಿತಿ ನೀಡಿದರು.ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿದರು, ಕೋಶಾಧಿಕಾರಿ ಸೋಮಪ್ಪ ಮೂಲ್ಯ ಲೆಕ್ಕ ಪತ್ರ ಮಂಡಿಸಿದರು.  ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿ ಓಬಯ್ಯ ಮೂಲ್ಯ ವಂದಿಸಿದರು.ಶ್ರೀಮತಿ ಭಾರತೀ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಶೀನ ಮೂಲ್ಯ ಅಲ್ಲಿಪಾದೆ,  ಸದಸ್ಯರಾದ ಕೃಷ್ಣಪ್ಪ ಬಡ್ಡಕಟ್ಟೆ, ನೀಲಪ್ಪ ಸಾಲಿಯಾನ್ ತುಂಬೆ,ವಿಠಲ ಮೂಲ್ಯ ಜಕ್ರಿ ಬೆಟ್ಟು,ರಾಮ ಮೂಲ್ಯ ಮರ್ದೋಳಿ ಸಹಕರಿಸಿದರು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter