ಕಮಲಶಿಲೆಯಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ
ಬಂಟ್ವಾಳ: ಹಿರಿಯರು ಕ್ರಿಯಾಶೀಲರಾಗಿರಲು ಪ್ರತಿಷ್ಠಾನದ ಚಟುವಟಿಕೆಗಳು ಪೂರಕವಾಗಿದ್ದು 50 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಸೇರ್ಪಡೆಗೊಳ್ಳುವ ಮೂಲಕ ಉತ್ತಮ ಸೇವಾ ಕಾರ್ಯಗಳು ನಡೆಯುವಂತಾಗಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ತಿಳಿಸಿದರು.
ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕ್ಷೇತ್ರ ಸಂದರ್ಶನ ಕಾರ್ಯಕ್ರಮದ ನಿಮಿತ್ತ ಕಮಲಶಿಲೆ ಕ್ಷೇತ್ರದಲ್ಲಿ ಜರಗಿದ ಪ್ರತಿಷ್ಠಾನದ ಕೇಂದ್ರ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.
ನೀಲಾವರದ ಗೋಶಾಲೆ, ಶ್ರೀಗೋಪಾಲಕೃಷ್ಣ ದೇವಸ್ಥಾನ, ಮಂದರ್ತಿಕ್ಷೇತ್ರ,ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ತಂಡದಲ್ಲಿದ್ದ 33 ಹಿರಿಯ ಸದಸ್ಯರಿದ್ದರು ವೀಕ್ಷಿಸಿದರು.
ಕಮಲಶಿಲೆ ಕ್ಷೇತ್ರದಲ್ಲಿ ಭರತ್. ಕೆ ಮಂಗಳೂರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯ ಶಂಕರ ರೈ ಪುಣಚ, ಜಯರಾಮ ಪೂಜಾರಿ ನರಿಕೊಂಬು, ಚಂದ್ರಶೇಖರ ಆಳ್ವ ಪಡುಮಲೆ, ರಾಮಕೃಷ್ಣ ನಾಯಕ್ ಕೋಕಳ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಜಯರಾಮ ಭಂಡಾರಿ ಎಂ ಧರ್ಮಸ್ಥಳ ವಂದಿಸಿದರು.