ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ”ನಶಾ ಮುಕ್ತ ಭಾರತ ಅಭಿಯಾನ
ಬಂಟ್ವಾಳ : ಪ್ರಸ್ತುತ ಸನ್ನಿವೇಶದಲ್ಲಿ ‘ಮಾದಕವ್ಯಸನ’ಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ಅದರಲ್ಲೂ ಯುವಜನತೆಯು ಮಾದಕವಸ್ತುಗಳ ಸೇವನೆಯಲ್ಲಿ ಮುಂದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.ಇದು ಭವಿಷ್ಯದ ಸಮಾಜವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಇದರ ಅಪಾಯವನ್ನು ಅರಿತುಕೊಂಡು ಕೂಡಲೇ ಜಾಗೃತರಾಗಿರಬೇಕೆಂದು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗವರ್ಧನ್ ಡಿ.ಎಮ್. ಕರೆ ನೀಡಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಆಯೋಜಿಸಲಾದ” ನಶಾಮುಕ್ತಭಾರತ ಅಭಿಯಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಈ ಪುನಶ್ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿರುವ ಅನುಕೂಲಗಳು, ಪದವಿ ಅಧ್ಯಯನದ ಅವಶ್ಯಕತೆ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಶಿವಣ್ಣಪ್ರಭುರವರು ಪಠ್ಯಕ್ರಮದ ಸ್ವರೂಪದ ಕುರಿತು ವಿವರಿಸಿದರು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ಕಾಶೀನಾಥ ಶಾಸ್ತ್ರೀ, ಎನ್.ಎಸ್.ಎಸ್., ಎನ್.ಸಿ.ಸಿ. ಯೋಜನೆಗಳ ಉಪಯೋಗಗಳನ್ನು ತಿಳಿಸಿದರು. ವಿದ್ಯಾರ್ಥಿನಿಯರಾದ ಹೇಮಲತಾ, ಶಾಖಾಂಬರಿ ಪ್ರಾರ್ಥಿಸಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸಹನಾ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಪ್ರಾಧ್ಯಾಪಕೇತರ ನೌಕರರು ಉಪಸ್ಥಿತರಿದ್ದರು.