ಮೊಗರ್ನಾಡ್: ಸಂತ ಲಾರೆನ್ಸ್ ವಾಳೆ ವಾರ್ಷಿಕೋತ್ಸವ
ಬಂಟ್ವಾಳ: ಪ್ರತೀ ಕುಟುಂಬಗಳು ಸಂಘಟಿತ ಮನೋಭಾವದಿಂದ ಸಮಾಜಮುಖಿಯಾಗಿ ತೊಡಗಿಸಿಕೊಂಡಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೊಗರ್ನಾಡು ದೇವಮಾತೆ ಚರ್ಚ್ನ ಧರ್ಮಗುರು ಅನಿಲ್ ಕ್ಯಾನುಟ್ ಡಿಮೆಲ್ಲೊ ಹೇಳಿದ್ದಾರೆ.

ಇಲ್ಲಿನ ಮೊಗರ್ನಾಡು ಸಂತ ಲಾರೆನ್ಸ್ ವಾಳೆಯ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕುಟುಂಬದಲ್ಲಿ ಐಕ್ಯತೆಯಿಂದ ಜೀವಿಸುವ ಮೂಲಕ ಮಕ್ಕಳಿಗೆ ಸಂಸ್ಕಾರ ಕಲಿಸಿ ಎಲ್ಲರೂ ಪ್ರೀತಿಯಿಂದ ಕೂಡಿ ಬಾಳುವ ಸಂದೇಶ ನೀಡಬೇಕು ಎಂದರು.
ಸಂತ ಅಂತೋನಿ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಆನ್ನಿ ಶುಭ ಹಾರೈಸಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಮುಖರಾದ ಸಿಸ್ಟರ್ ಸುಚಿತ, ಜೋಯಲ್, ಅಶ್ವಿನ್, ವಾಳೆಯ ಮುಖ್ಯಸ್ಥೆ ಪ್ರಫುಲ್ಲಾ ಜಾನೆಟ್ ಡಿಕ್ರೂಜ್, ಮೊಡಂಕಾಪು ರೋಟರಿ ಸಂಸ್ಥೆ ಅಧ್ಯಕ್ಷ ಅಲೆಕ್ಸಾಂಡರ್ ಲೋಬೊ, ಸಿಸಿಲಿಯಾ ವೇಗಸ್, ಮೊಗರ್ನಾಡು ಲಯನ್ಸ್ ಅಧ್ಯಕ್ಷ ಎಡ್ವಿನ್ ನೊರೋನ್ನಾ, ಐ ಸಿ ವೈ ಎಂ ಅಧ್ಯಕ್ಷ ಮೆಲ್ರೋಯ್, ರೀಟಾ ಫೆರ್ನಾಂಡಿಸ್, ವಿಲ್ಪ್ರೆಡ್ ಲೋಬೊ, ಸ್ಟ್ಯಾನಿ ಪಿಂಟೋ, ಸಂತೋಷ್ ಡಿಸೋಜ, ಮ್ಯಾಕ್ಸಿಂ ಡಿಸೋಜ, ಪ್ರೆಸಿಲ್ಲಾ ಡಿಸೋಜ, ಶರ್ಮಿಳ ಡಿಸೋಜ, ರೊಶನ್ ಲೋಬೋ, ಜೆರೋಮ್ ಲೋಬೊ, ವಿನೋದ್ ಡಿಸೋಜ,ಸೌಮ್ಯ, ರಮ್ಯಾ, ಜೋಸ್ಲಿನ್, ಜೋಶಲ್ ,ಆರೋನ್, ಪೆಲ್ಸಿಟಾ ಮತ್ತಿತರರು ಇದ್ದರು.