ಉಳ್ಳಾಲ: ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿ ಚಿದಾನಂದ ಗುರಿಕಾರ ನಂದ್ಯ ಆಯ್ಕೆ.
ಕೈಕಂಬ: ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲ ೨೦೨೪ರಿಂದ ೨೦೨೯ರ ವರೆಗೆ ೫ ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ ಇವರು ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯಾವಾಗಿ ದುಡಿದ ಚಿದಾನಂದ ಗುರಿಕಾರರು ಅಡ್ಡೂರು ಶ್ರೀ ಸಾರ್ವಜನಿಕ ಗಣೆಶೋತ್ಸವದ ಅಧ್ಯಕ್ಷರಾಗಿಯೂ ಆಯ್ಕೆಯಾಗಿರುತ್ತಾರೆ.ಇವರಿಗೆ ಶ್ರೀ ಭಗವತೀ ಮಾತೆ ಹಾಗೂ ಶ್ರೀ ರಾಜರಾಜೇಶ್ವರೀ ದೇವಿಯೂ ಅನುಗ್ರಹಿಸಲಿ.