ಈಜು ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ
ಬಂಟ್ಚಾಳ :ಶಕ್ತಿ ವಸತಿ ಶಾಲೆ, ಶಕ್ತಿ ಪ. ಪೂ. ಕಾಲೇಜು ಮತ್ತು ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಮಂಗಳೂರು ಶಕ್ತಿನಗರದ ಸರೋಶ್ ಸ್ಮಾರಕ ಈಜು ಕೊಳದಲ್ಲಿ ಜರಗಿದ ಜಿಲ್ಲಾಮಟ್ಟದ ಈಜು ಸ್ಫರ್ಧೆಯಲ್ಲಿಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆ ಯ 9 ನೇ ತರಗತಿಯ ವಿದ್ಯಾರ್ಥಿನಿ ಅನರ್ಘ್ಯ. ಎ.ಆರ್.

ಇವರು 17 ವರ್ಷ ದ ಒಳಗಿನ ವಯೋಮಾನದ ಹುಡುಗಿಯರ 200 ಮೀ ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ ಇಂಡಿವಿಜುವಲ್ ಮೆಡ್ಲೆ ಹಾಗೂ 400 ಮೀ ಇಂಡಿವಿಜುವಲ್ ಮೆಡ್ಲೆ ಯಲ್ಲಿ 3 ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಇವರು ರೇಷ್ಮೆ ಇಲಾಖೆಯ ನಿವ್ರತ್ತ ಇನ್ಸಫೆಕ್ಟರ್ ಬಿ.ಕೆ.ನಾಯ್ಕ್ ರವರ ಶಿಷ್ಯಯಾಗಿದ್ದು ಮಂಗಳೂರಿನ ಅಲೋಶಿಯಸ್ ವಿ ವನ್ ಈಜು ಕೊಳದ ಮುಖ್ಯ ತರಭೇತಿದಾರರಾದ ಲೋಕರಾಜ್ ವಿಟ್ಲ ಮತ್ತು ಸ್ಯಾಂಜು ರವರಿಂದ ತರಭೇತಿ ಪಡೆಯುತ್ತಿದ್ದಾರೆ.