ಬಿ ಸಿ ರೋಡು ಕಡಪಿಕರಿಯ ಕುಟುಂಬದ ನಾಗರ ಪಂಚಮಿ ಆಚರಣೆ
ಬಿ.ಸಿ.ರೋಡು ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಆಚರಣೆ ಇಂದು ಶುಕ್ರವಾರ ಜರಗಿತು.ಪ್ರಧಾನ ಅರ್ಚಕ ಪುರೋಹಿತ್ ಮೊಗರ್ನಾಡು ರಾಜಗೋಪಾಲ ಆಚಾರ್ಯ ನೇತೃತ್ವದಲ್ಲಿ ವಿಧಿವಿಧಾನ ಕಾರ್ಯಕ್ರಮ ನಡೆಯಿತು.

ನಾಗದೇವರ ಪ್ರತಿಮೆಗೆ ಸಿಯಾಳ, ಹಾಲೆರೆಯುವ ಮೂಲಕ ಪೂಜಾ ವಿಧಿ ವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಳಿಕ ಕುಟುಂಬದ ಸದಾಶಿವ ಕೈಕಂಬ ಮತ್ತು ಸದಸ್ಯರು ಶ್ರೀ ನಾಗದೇವರ ಪ್ರಸಾದ ಸ್ವೀಕರಿಸಿದರು.
