ಬಂಟ್ವಾಳ ಪ್ರಧಾನ ಸಿವಿಲ್ ನಾಯಧೀಶರಿಗೆ ಬೆಳಗಾವಿಗೆ ವರ್ಗ,ವಕೀಲರಿಂದ ಬೀಳ್ಕೋಡುಗೆ
ಬಂಟ್ವಾಳ: ಕಳೆದ ಎರಡೂವರೆ ವರ್ಷಗಳ ಕಾಲ ಬಂಟ್ವಾಳ ಪ್ರಧಾನ ಸಿವಿಲ್ ನಾಯಧೀಶರಾಗಿದ್ದು, ಇದೀಗ ಬೆಳಗಾವಿ ಜಿಲ್ಲೆಯ ಕಾಣಪುರ ತಾಲೂಕಿಗೆ ವರ್ಗಾವಣೆಗೊಂಡ ನ್ಯಾಯಾಧೀಶರಾದ ಚಂದ್ರಶೇಖರ ವೈ ತಳವಾರ ಅವರನ್ನುಬಂಟ್ವಾಳ ವಕೀಲರ ( ರಿ)ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ಹಾಗೂ ಜೆ. ಎಂ ಎಫ್ ಸಿ ನಾಯದೀಶೆಯಾದ ಭಾಗ್ಯಮ್ಮ ಹಾಗೂ ಜೆ ಎಂ ಎಫ್ ಸಿ.ನ್ಯಾಯಾಲಯದ ನ್ಯಾಯಾದೀಶರಾದ ಕೃಷ್ಣಮೂರ್ತಿಯವರು ಪ್ರಧಾನ ನ್ಯಾಯದೀಶರ ನೀಡಿದ ಸಹಕಾರವನ್ನು ಸ್ಮರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿ ಕೋಸ್ಟ, ಉಪಾಧ್ಯಕ್ಷ ರಾಜೇಶ್ ಬೋಳುಕಲ್ಲು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಡಿ,ಜತೆ ಕಾರ್ಯದರ್ಶಿ ಸುನಿತಾ, ಖಜಾಂಜಿ ನಿರ್ಮಲ ಹಾಗೂ ವಕೀಲರ ಸಂಘದ ಹಿರಿಯ ಸದಸ್ಯರಾದ ಅಶ್ವಿನಿ ಕುಮಾರ್ ರೈ, ರಮೇಶ್ ಉಪಧ್ಯಾಯ, ಪುಂಡಿಕಾಯಿ ನಾರಾಯಣ ಭಟ್, ಶ್ರೀಧರ್ ಪೈ, ಚಂದ್ರಶೇಖರ್ ಕೆವಿ, ಕಜೆ ರಾಮಚಂದ್ರ ಭಟ್, ಜಯರಾಮ್ ರೈ, ವೆಂಕಟರಮಣ ಶೆಣೈ, ಉಪಸ್ಥಿತರಿದ್ದರು.
ವಕೀಲರಾದ ಗಿರೀಶ್ ಮುಳಿಯಾಳ ಸ್ವಾಗತಿಸಿದರು. ಚಂದ್ರಶೇಖರ್ ಪುಂಚೆಮೆ ವಂದಿಸಿದರು,ಶೈಲಜಾ ಕಾರ್ಯಕ್ರಮ ನಿರೂಪಿಸಿದರು.