Published On: Sat, Aug 3rd, 2024

ಬಿ.ಸಿ.ರೋಡಿನಲ್ಲಿ ಎರಡು ದಿನಗಳ “ಬೃಹತ್ ಆಹಾರ ಮೇಳ ಹಾಗೂ ಹಲಸಿನ ಹಬ್ಬ”ಕ್ಕೆ ಚಾಲನೆ

ಬಂಟ್ವಾಳ: ಸೀನಿಯ‌ರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕ ಇದರ ಆಶ್ರಯದಲ್ಲಿ ಎರಡುದಿನಗಳ  “ಬೃಹತ್ ಆಹಾರ ಮೇಳ ಹಾಗೂ ಹಲಸಿನ ಹಬ್ಬ”ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ರಾಷ್ಟ್ರೀಯಾಧ್ಯಕ್ಷರಾದ ಚಿತ್ರ ಕುಮಾರ್ ಆಹಾರಮೇಳವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಸಂಸ್ಥೆಯನ್ನು ನಾವೆಷ್ಟು ಪ್ರೀತಿಸುತ್ತವೆಯೋ,ಆಸಂಸ್ಥೆಯು ನಮ್ಮನ್ನು ಗುರುತಿಸಿಉನ್ನತಸ್ಥಾನಕ್ಕೇರಿಸುತ್ತದೆ. ಪ್ರತಿಭಾನ್ವಿತರನ್ನು ಅಥವಾ ಸಾಧಕರನ್ನು ಗುರುತಿಸಿ ಅವರ ಮನೆಬಾಗಿಲಿಗೆ ತೆರಳಿ ಗೌರವಿಸಿದಾಗ ಸ್ಥಳೀಯವಾಗಿ ಅದು ಇತರರಿಗೆ ಪ್ರೇರಣೆಯಾಗುತ್ತದೆ ಎಂದರು.

ವಯನಾಡು ದುರಂತ ಸೇರಿಂದಂತೆ ಪ್ರಾಕೃತಿಕವಿಕೋಪದಿಂದ ಅನಾಹುತಕ್ಕೊಳಗಾದ ಇತರ ಪ್ರದೇಶದ ಸಂತ್ರಸ್ಥರಿಗೂ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನಿಂದ ನೆರವು ನೀಡಲು ಯೋಜನೆ ಹಾಕಲಾಗಿದೆ ಎಂದ ಅವರು ಸಂಸ್ಥೆಯು ಪ್ರಸ್ತುತ ಹಾಕಿಕೊಂಡಿರುವ ಸ್ವಚ್ಚಗಂಗಾಯೋಜನೆಯಡಿ ಜನರು ಮತ್ತು ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿಬಾವಿ,ಕೆರೆಯನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ರೂಪಿಸಲಾಗಿದೆ.  ಬಂಟ್ವಾಳ ನೇತ್ರಾವತಿ ಸಂಗಮ ಆಯೋಜಿಸಿರುವ ಆಹಾರ ಮೇಳ ಹೊಸ ಹೆಜ್ಜೆಗುರುತನ್ನು  ಮೂಡಿಸಿದೆ ಎಂದರು.

ಅತಿಥಿಯಾಗಿದ್ದ ಭಾರತೀಯ ಜೈನ್ ಮಿಲನ್ ವಲಯ 8 ರ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಹಲಸಿನ ಹಣ್ಣು ಅದರದೇಆದ ಮೌಲ್ಯವರ್ಧಿತ ಸತ್ವವನ್ನು ಹೊಂದಿದೆ. ವಿವಿಧ ಬಣ್ಣಗಳಲ್ಲು ಪ್ರಸ್ತುತ ದೊರೆಯುತ್ತಿದ್ದು,ಅದರ  ಮರ ಕೂಡ ವಿಶೇಷವಾದ ಮೌಲ್ಯವನ್ನು ಹೊಂದಿದೆ ಎಂದರು.

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್,ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ,ಸೀನಿಯರ್ ಪಿಪಿಎಫ್ ಡಾ. ಕೆ. ಅರವಿಂದ ರಾವ್, ಸೀನಿಯರ್ ಪಿಪಿಎಫ್ ಕಿಶೋರ್ ಫೆರ್ನಾಂಡೀಸ್,ಜೋಡುಮಾರ್ಗ ಸೀನಿಯರ್ ಜೇಸಿಸ್ ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ನರಿಕೊಂಬುಗ್ರಾಮದ ಅಶಕ್ತ ಕುಟುಂಬವೊಂದಕ್ಕೆ ಸಹಾಯಧನವನ್ನು  ವಿತರಿಸಲಾಯಿತು.ವಯನಾಡು ದುರಂತದಲ್ಲಿ ಮಡಿದವರಿಗೆ ಮೌನಪ್ರಾರ್ಥನೆಯ ಮೂಲಕ ಶೃದ್ಧಾಂಜಲಿ ಅರ್ಪಿಸಲಾಯಿತು.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷ ಆದಿರಾಜ್ ಜೈನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸದಸ್ಯರಾದ ನ್ಯಾಯವಾದಿ ರವೀಂದ್ರ ಕುಕ್ಕಾಜೆ,ಪತ್ರಕರ್ತ ಸಂದೀಪ್ ಸಾಲ್ಯಾನ್,ನಿರ್ದೇಶಕ ರಾಮಚಂದ್ರ ರಾವ್,ಕೋಶಾಧಿಕಾರಿ ನಾಗೇಶ್ ಕುಲಾಲ್ ಮೊದಲಾದವರಿದ್ದರು.ನ್ಯಾಯವಾದಿ ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

 ವಿವಿಧ ಗೋಷ್ಟೀಗಳು: 

ನಂತರ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೋಷ್ಟಿಗಳು ನಡೆಯಿತು.ಕೃಪಿ ಮತ್ತು ಪರಿಸರದ ಬಗ್ಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣಭಟ್,ಮೌಲ್ಯವರ್ಧನೆಯ ಪ್ರಾಮುಖ್ಯತೆ ಬಗ್ಗೆ ವಿಟ್ಲ ಪಿಂಗಾರ ರೈತ ಉತ್ಪದಕರ ಕಂಪೆನಿಯ ಅಧ್ಯಕ್ಷ ರಾಮಕಿಶೋರ ಕೆ.,ಹಾಗು ರಾಂಬೂಟನ್, ಡ್ರಾಗನ್ ಪ್ಯೂಟ್ ಸೇರಿದಂತೆ ವಿವಿಧ ಬಗೆಯ ಹಣ್ಣು ಹಪಲುಗಳ ಬೆಳೆಯ ಬಗ್ಗೆ ಬಂಟ್ವಾಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಅವರು ಮಾಹಿತಿ ನೀಡಿದರು.

ಜೋಡುಮಾರ್ಗ ಸೀನಿಯರ್ ಜೇಸಿಸ್ ಸ್ಥಾಪಕಾಧ್ಯಕ್ಷಜಯಾನಂದ ಪೆರಾಜೆ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ಹರೀಶ್ಚಂದ್ರ ಆಳ್ವ ಪದೆಂಜಾರು,ಶಾಂತಿಪ್ರಸಾದ್ಮರೈದೊಟ್ಟು ಗುತ್ತು ಉಪಸ್ಥಿತರಿದ್ದರು.

ಮಾರಾಟ ಮತ್ತು ಪ್ರದರ್ಶನ

ಆಹಾರ ಮೇಳದಲ್ಲಿ ಶುದ್ಧ ಸಸ್ಯಹಾರಿ ಹಲಸು, ಮಾವು, ಹಾಗೂ ಹಲವು ಬಗೆಯ ಹಣ್ಣುಗಳ ವೈವಿಧ್ಯಮಯ ಆಹಾರೋತ್ಪನ್ನಗಳು, ರಾಂಬೂಟನ್, ಡ್ರಾಗನ್ ಪ್ಯೂಟ್ ಸೇರಿದಂತೆ ವಿವಿಧ ಬಗೆಯ ಸಕಾಲಿಕ ಹಣ್ಣುಗಳ ಮಾರಾಟ ಹಲವು ಬಗೆಯ ಹಣ್ಣಿನ ಗಿಡಗಳ ಸಹಿತ ವಿವಿಧ ಉತ್ಪನ್ನಗಳ ಮಾರಾಟ ಮತ್ತು‌ಪ್ರದರ್ಶನವು ಭರ್ಜರಿಯಾಗಿ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter