ಬಂಟ್ವಾಳದಲ್ಲಿ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜಯಾನಂದ ಪೆರಾಜೆ ಆಯ್ಕೆ
ಬಂಟ್ವಾಳ:ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿಯ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಬಂಟ್ವಾಳ ದಲ್ಲಿ ನಡೆಯಲಿರುವ ದ.ಕ.ಜಿಲ್ಲಾಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ,ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆ ಎಂದು ಕಚುಸಾಪ ರಾಜ್ಯಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನವು ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ಅಧ್ಯಕ್ಷ ಆದಿರಾಜ ಜೈನ್ ನೇತೃತ್ವದಲ್ಲಿ ಆ.4ರಂದು ಬಿಸಿರೋಡಿನ ಸ್ಪರ್ಶ ಕಲಾಕೇಂದ್ರ ದಲ್ಲಿ ನಡೆಯಲಿದೆ.ಸಮ್ಮೇಳನ ದಲ್ಲಿಸಾಹಿತ್ಯ ಗೋಷ್ಠಿ, ಪರಿಸರ ಚುಟುಕು ಕವಿಗೋಷ್ಠಿ,ಸಾಂಸ್ಕ್ರತಿಕ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ