ಕಳ್ಳಿಗೆ ಓಂ ಫ್ರೆಂಡ್ಸ್ ಕ್ಲಬ್ ವತಿಯಿಂದ ‘ಆಟಿದಕೂಟ’
ಬಂಟ್ವಾಳ:ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಓಂ ಫ್ರೆಂಡ್ಸ್ ಕ್ಲಬ್ ( ರಿ )ಇದರ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಸಂಘದ ಶ್ರೀ ಕೃಷ್ಣ ವೇದಿಕೆ ಯಲ್ಲಿ ನಡೆಯಿತು.ಬಂಟ್ವಾಳ ತಾಲೂಕು ಉಪ ತಹಶೀಲ್ದಾರ್ ನವೀನ್ ಬೆಂಜನ್ ಪದವು ಆಟಿ ತಿಂಗಳ ಮಹತ್ವ, ಆಚರಣೆಗಳು, ತುಳುವರ ಆಚಾರ, ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಂಘದ ಅಧ್ಯಕ್ಷರಾದ ಭುವನೇಶ್ ಪಚಿನಡ್ಕ,ಬಾಲ ಗೋಕುಲದ ಅಧ್ಯಕ್ಷರಾದ ಮಲ್ಲಿಕಾ ರೈ,ಸಂಘದ ರಜತ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡು ,ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ್ ಕುಮಾರ್ , ಸಂಘದ ಆಡಳಿತ ಸಮಿತಿ, ರಜತ ಸಂಭ್ರಮ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
ಇದಕ್ಕು ಮೊದಲು ಓಂ ಫ್ರೆಂಡ್ಸ್ ರಾಧಾಕೃಷ್ಣ ಬಾಲಗೋಕುಲದ ಮಾತಾಜಿ ಹಾಗು ಸದಸ್ಯ ರಿಂದ ತುಳು ಜಾನಪದ ಗೀತೆಗಳಿಗೆ ನ್ರತ್ಯ ವೈಭವ ನಡೆಯಿತು. ಆಟಿಯ ತಿಂಗಳ 35 ಬಗೆಯ ತಿನಿಸುಗಳ ಸಹಭೋಜನವು ನಡೆಯಿತು..