ಕಲ್ಲಡ್ಕ ಶೌರ್ಯ ವಿಪತ್ತು ತಂಡದಿಂದ ಕಂಠಿಕ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯ ಕೊಠಡಿಗಳ ತೆರವು
ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಕಂಠಿಕ ಕಿರಿಯ ಶಾಲೆಯ ಶಿಥಿಲಾವಸ್ಥೆಯ 3 ಕೊಠಡಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನದ ಮೂಲಕ ತೆರವು ಮಾಡಿದೆ.

ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಎಸ್.ಡಿ.ಎಂ.ಸಿ.ಯವರ ಮನವಿ ಮೇರೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ತಂಡ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ತೆರವು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ. ಎನ್ ದೂರವಾಣಿ ಮೂಲಕ ಸಂಪರ್ಕಿಸಿ ಶೌರ್ಯ ವಿಪತ್ತು ತಂಡದ ಕಾರ್ಯಕ್ಕೆ ಇಲಾಖಾಪರವಾಗಿ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಆಟಿತಿಂಗಳ” ಆಟಿ ಕೆಳೆಂಜ” ಶ್ರಮದಾನ ನಡೆಯುವ ಸ್ಥಳಕ್ಕಾಗಮಿಸಿ ಕುಣಿತ ಮಾಡಿ ಶೌರ್ಯ ತಂಡದ ಕೆಲಸಕ್ಕೆ ಪ್ರೇರಣೆ ನೀಡಿದರು.
ಗ್ರಾಮಾಭಿವೃದ್ಧಿಯೋಜನೆಯ ತಾಲೂಕು ಯೋಜನಾಧಿಕಾರಿ ರಮೇಶ್ ಹಾಗೂ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಶ್ರಮದಾನದ ಸಂದರ್ಭ ಭೇಟಿ ನೀಡಿ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು,ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ,ತಂಡದ ಸಂಯೋಜಕಿ ವಿದ್ಯಾ, ಶೌರ್ಯ ತಂಡದ ಸದಸ್ಯರುಗಳಾದ ಗಣೇಶ್,ರವಿಚಂದ್ರ, ಧನಂಜಯ,ಚಿನ್ನಾ, ಸೌಮ್ಯ,ವಿದ್ಯಾ, ಮೌರೀಶ್, ರಮೇಶ್,ವೆಂಕಪ್ಪ,ಸಂತೋಷ್,ಸತೀಶ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಚೇತನಾ ಕುಮಾರಿ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್, ಸದಸ್ಯರುಗಳಾದ ಸೌಮ್ಯ, ರಾಜೇಶ್, ಶಾರದಾ,ದೇವಕಿ, ರಘು, ಶಶಿ,ಭವಾನಿ,ಮೋಹಿನಿ, ಹಿರಿಯ ವಿದ್ಯಾರ್ಥಿಗಳಾದ ರೋಹಿತ್, ಅಕ್ಷತ್, ಚಂದ್ರಶೇಖರ್, ಸುರೇಶ್, ಸತೀಶ್, ಶಿಕ್ಷಕಿರಾದ ಮೋನಿಷ, ಬಬಿತಾ, ಅಡುಗೆ ಸಿಬ್ಬಂದಿ ಭವಾನಿ ಮೊದಲಾದವರು ಭಾಗವಹಿಸಿದ್ದರು.