Published On: Mon, Jul 29th, 2024

ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಕಾರ್ಗಿಲ್ ಸಂಸ್ಮರಣೆ

ಬಂಟ್ವಾಳ:  ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೨೫ನೇ ವರ್ಷದ ಕಾರ್ಗಿಲ್ ಸಂಸ್ಮರಣೆಯನ್ನು ಮಾಜಿ ಸೈನಿಕರೊಂದಿಗೆ ಹಮ್ಮಿಕೊಳ್ಳಲಾಯಿತು.

ಚಂಡಿಗಢ, ಹರಿಯಾಣ, ಲಡಾಖ್, ಪಂಜಾಬ್, ಉತ್ತರಪ್ರದೇಶದಲ್ಲಿ ಪ್ಯಾರಾ ಟ್ರೂಪರ್ ಕಮಾಂಡೋ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಸತೀಶ್ ಸುವರ್ಣ ಮಾತನಾಡಿ, “ದೇಶದ ಸರ್ವೊಚ್ಛ ಬಲಿದಾನದ ಪ್ರತೀಕ ಕಾರ್ಗಿಲ್ ಯುದ್ದ. ವಿದ್ಯಾರ್ಥಿಗಳು ಒರ್ವ ವ್ಯಕ್ತಿಯಾಗಿ ಮಾತ್ರ ಬೆಳೆಯದೇ, ವ್ಯಕ್ತಿತ್ವದ ಬೆಳವಣಿಗೆಯಾಗಬೇಕು,ಸೈನಿಕರ ಜೀವನವನ್ನು ಆದರ್ಶವಾಗಿಟ್ಟುಕೊಂಡು ದೇಶದ ಒಳಿತಿಗಾಗಿ ಪ್ರಯತ್ನಿಸ ಬೇಕು ಎಂದರು.

ವಿದ್ಯಾರ್ಥಿಗಳು ದೇಶದ ಬುನಾದಿ ಗಟ್ಟಿಗೊಳಿಸುವ, ಉನ್ನತಿಗೆ ಕೊಂಡೊಯ್ಯುವ, ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು ,ನಮ್ಮ ಸೈನಿಕರು ಅಸಾಧ್ಯವಾದುದನ್ನು ಪ್ರಯತ್ನದಿಂದ ಸಾಧಿಸಿ ತೋರಿಸಿದ್ದಾರೆ ಎಂದರು.ಇದಕ್ಕು ಮೊದಲು ಮಾಜಿ ಸೈನಿಕರಿಂದ ದೀಪಪ್ರಜ್ವಲನೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ನಡೆಯಿತು. 

ನಂತರ ಜುಲೈ ತಿಂಗಳಿನಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಅಧ್ಯಾಪಕ ವೃಂದದವರು ಆರತಿ -ಅಕ್ಷತೆ, ತಿಲಕಧಾರಣೆ ಮಾಡಿ ಸಿಹಿ ಹಂಚಿದರು. ಮಕ್ಕಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ನಿಧಿ ಸಮರ್ಪಿಸಿ ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು. ನಂತರ ೭ನೇ ತರಗತಿಯ ಮಾನಸ ಪ್ರೇರಣಾ ಗೀತೆ ಹಾಡಿದರು.

ಭೂಸೇನೆಯ ಇ.ಎಂ.ಇ ಕ್ರಾಪ್ಸ್ ನಲ್ಲಿ ರಿಕವರಿ ಮೆಕ್ಯಾಮಿಕ್ ಆಗಿ ಸೇರ್ಪಡೆಗೊಂಡು, ನಾಯಕ್ ಪದವಿ ಪಡೆದು ನಿವೃತ್ತ ಹೊಂದಿದ, ಚಂದ್ರಶೇಖರ್ ಮಾತನಾಡಿ, “ವಿದ್ಯಾರ್ಥಿ ಜೀವನದಿಂದಲೇ ಶಿಸ್ತು, ಸಂಯಮ, ಸದಾಚಾರದದ ಜೊತೆಗೆ ದೇಶಭಕ್ತಿಯನ್ನು ಬೆಳೆಸಬೇಕು.  ದೇಶದ ಹೊರಗಿನ ಶತ್ರುಗಳಿಗಿಂತ, ಒಳಗಿನ ಶತ್ರುಗಳಿಂದಲೇ ನಲುಗುತ್ತಿದೆ. ನಾನು ದೇಶಕ್ಕೆ ಏನಾದರೂ ಕೊಡುಗೆಯನ್ನು ಕೊಡಬೇಕೆಂಬ ಮನಸ್ಸು ಬರಬೇಕು. ಈ ದೇಶಪ್ರೇಮ ಮೂಡಿಸುವ ಕಾರ್ಯ ಶ್ರೀರಾಮ ವಿದ್ಯಾಸಂಸ್ಥೆಯಿಂದ ನಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಇದೇ ವೇಳೆ ನಿವೃತ್ತ ಯೋಧರಿಗೆ ಶ್ರೀರಾಮ  ಶಾಲು ಹೊದಿಸಿ ಗೌರವ ಸಮರ್ಪಿಸಿದರು. 

 ಭಾರತೀಯ ಭೂಸೇನಾ ನಿವೃತ್ತ ಎ.ಸಿ.ಪಿ ಹವಾಲ್ದಾರ್, ಕರ್ತವ್ಯದ ಸಮಯದಲ್ಲಿ ಪೃಥ್ವಿ ೨ ಮಿಸೈಲ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೊತೆ ಕ್ಷಿಪಣಿ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ ಜಯಕುಮಾರ್ ಪಿ ಕೆದಿಲ, ಭಾರತೀಯ ಸೇನೆಯ ಪ್ಯಾರಚ್ಯೂಟ್ ಸೆಕೆಂಡ್ ಪ್ಯಾರಾ ಕಮಾಂಡೋ ಬೆಟಾಲಿಯನ್ ಆಗಿ ಕಾರ್ಯನಿರ್ವಹಿಸಿ, ಆಪರೇಷನ್ ಮೇಘದೂತ್ ಹಾಗೂ ಆಪರೇಷನ್ ಬ್ಲೂಸ್ಟಾರ್ ಭಾಗವಹಿಸಿ ನಿವೃತ್ತರಾದ ದಯಾನಂದ್ ನಾಯಕ್, ದೇಶದ ವಿವಿಧ ಭಾಗಗಳಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾದ ರಾಜೇಂದ್ರ, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್, ಶ್ರೀರಾಮ ವಿದ್ಯಾಕೆಂದ್ರದ ಆಡಳಿತ ಮಂಡಳಿಯ ಸದಸ್ಯ ನಾಗೇಶ್ , ಸಹಮುಖ್ಯೋಪಾಧ್ಯಾಯ ಸುಮಂತ್ ಆಳ್ವ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಾನ್ವಿ ಎಸ್ ಪಿ ಸ್ವಾಗತಿಸಿ, ರಾಜೇಶ್ವರಿ ಭಟ್ ಕಾರ್ಯಕ್ರಮ ನಿರೂಪಿಸಿದರು.ಪ್ರಾಪ್ತಿ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter