ಮಳೆ,ಗಾಳಿಗೆ ಮುಂದುವರಿದ ಹಾನಿ
ಬಂಟ್ವಾಳ: ಕಳೆದೆರಡು ದಿನಗಳಲ್ಲಿ ಗಾಳಿ,ಮಳೆಗೆ ಬಂಟ್ವಾಳದಲ್ಲಿ ಹಾನಿಮುಂದುವರಿದಿದೆ.
ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿ ಹಮೀದ್ ಎಂಬುವರ ಮನೆಯ ತಡೆಗೋಡೆ ಕುಸಿದು ಕೆಳಗಿನ ಮನೆಯ ಪ್ರೀತಿ ಡಿನ್ನಾ ಪಿರೇರ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿದೆ.

ಪುಣಚ ಗ್ರಾಮದ ಬಡೆಕನಡ್ಕ ಎಂಬಲ್ಲಿ ಚೋಮ ಅವರ ವಾಸ್ತವ್ಯದ ಕಚ್ಚಾ ಮನೆಗೆ ತೀವ್ರ ಹಾನಿಯಾಗಿದೆ.
ಪುದು ಗ್ರಾಮದ ನಿರೋಲ್ಬೆ ಎಂಬಲ್ಲಿ ಬಾಬುಶೆಟ್ಟಿ ಅವರ ಮನೆಪಕ್ಕದ ಗೋಡೆ ಕುಸಿದಿದೆ.
ಇದೇ ಗ್ರಾಮದಲ್ಲಿ ಮಮ್ತಾಜ್ ಅವರ ಮನೆಯ ಹಂಚು ಗಾಳಿಗೆ ಹಾರಿಹೋಗಿದ್ದಲ್ಲದೆ ಮನೆಯ ಗೋಡೆಗೂ ಹಾನಿಯಾಗಿದೆ.
ಬುಧವಾರ ಮಧಗಯಾಹ್ನದ ವರೆಗೆ ಮಳೆಯ ತೀವ್ರತೆ ಕಡಿಮೆ ಇದ್ದು ನೇತ್ರಾವತಿ ನದಿಯಲ್ಲು ಸಂಜೆಯ ವೇಳೆಗೆ ನೀರಿನ ಮಟ್ಟ 6.8ರಲ್ಲಿ ಹರಿಯುತಿತ್ತು. ನೀರು ಇಳಿಮುಖವಾದ ಹಿನ್ನಲೆಯಲ್ಲಿ ಬಂಟ್ವಾಳ ಸುತ್ತಮತ್ತಲಿನ ಕಾಳಜಿಕೇಂದ್ರದಲ್ಲಿ ವಾಸವಿದ್ದ ಸಂತ್ರಸ್ಥರು ಬಾಪಾಸ್ ತಮ್ಮ ಮನೆ ಸೇರಿದ್ದಾರೆ.ಕಳೆದ ಐದುವರ್ಷ ಹಿಂದೆ 11.6 ಮೀ.ನಲ್ಲಿ ಹರಿದಿದ್ದ ನೀರು 11 ಮೀ.ಗೆ ಸಮೀಪಿಸಿತ್ತು.