ಕೆಸರುಗದ್ದೆ ಕ್ರೀಡೆಯಿಂದ ದೈಹಿಕ, ಅರೋಗ್ಯ ಸದೃಢ: ವಿವೇಕಚೈತನ್ಯಾನಂದ ಸ್ವಾಮೀಜಿ
ಬಂಟ್ವಾಳ :ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಪ್ರತಿಯೊಂದು ಆಚರಣೆಯ ಹಿಂದೆ ದೂರದೃಷ್ಟಿಯ ಚಿಂತನೆ, ಪರಂಪರೆ ಇದೆ, ಕೆಸರುಗದ್ದೆ ಕ್ರೀಡೆಯಿಂದ ಮನೋರಂಜನೆಯೊಂದಿಗೆ ದೈಹಿಕ ಹಾಗೂ ಮಾನಸಿಕ ಅರೋಗ್ಯವು ಸದೃಢ ವಾಗುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕಾಚೈತನ್ಯಾನಂದ ಸ್ವಾಮೀಜಿಹೇಳಿದರು.

ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಸಮೀಪದ ಹೊಳ್ಳರಬೈಲು ಎಂಬಲ್ಲಿ ನವೋದಯ ಮಿತ್ರ ಕಲಾ ವೃಂದ(ರಿ ), ನೇತ್ರಾವತಿ ಮಾತೃ ಮಂಡಳಿ ಹಾಗೂ ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಸಹಯೋಗದಲ್ಲಿ “ಕೆಸರ್ಡ್ ಒಂಜಿ ದಿನ” ಗ್ರಾಮೀಣ ಕ್ರೀಡಾಕೂಟವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಪ್ರಮುಖರಾದ ಶ್ರಾವ್ಯ ಗೋ ಮಂದಿರದ ನಾರಾಯಣ ಹೊಳ್ಳ ನೆತ್ತರಕೆರೆಗುತ್ತು, ಪ್ರಗತಿಪರ ಕೃಷಿಕ ಜ್ಯೋತಿಂದ್ರ ಶೆಟ್ಟಿ ಮುಂಡಾಜೆ ಗುತ್ತು, ನ್ಯಾಯವಾದಿ ರಮೇಶ್ ಉಪಾಧ್ಯಾಯ ನೆತ್ತರಕೆರೆ, ಮಾಜಿ ತಾ.ಪಂ.ಉಪಾಧ್ಯಕ್ಷ ಪುರುಷ ಎನ್. ಸಾಲ್ಯಾನ್,ಉದ್ಯಮಿ ಸುರೇಶ ಸುರತ್ಕಲ್, ಜಗದೀಶ ಕುಲಾಲ್ ಹೊಳ್ಳರಬೈಲು, ಉಪಸ್ಥಿತರಿದ್ದರು.
ನವೋದಯ ಮಿತ್ರ ಕಲಾ ವೃಂದದ ಗೌರವಾಧ್ಯಕ್ಷ ಸುಬ್ರಮಣ್ಯ ರಾವ್, ಅಧ್ಯಕ್ಷ ಸಂತೋಷ ಕುಮಾರ್ ನೆತ್ತರಕೆರೆ, ಮಾಜಿ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ, ನೇತ್ರಾವತಿ ಮಾತೃ ಮಂಡಳಿಯ ಸಂಚಾಲಕಿ ಲಲಿತ ಸುಂದರ್, ಅಧ್ಯಕ್ಷೆ ಮಾಲತಿ ಚಂದ್ರಹಾಸ ಮತ್ತಿತರರಿದ್ದರು.
ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿದರು, ಕಳ್ಳಿಗೆ ಗ್ರಾ.ಪಂ ಸದಸ್ಯ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಕೆಸರು ಗದ್ದೆಯಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದು ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು,