ಬಜರಂಗ ದಳ ಸೇವಾ ಯೋಜನೆಯಿಂದ ನೆರವು
ಕೈಕಂಬ:ಬಜರಂಗ ದಳ ಸೇವಾ ಯೋಜನೆಯ ಗ್ರೂಪ್ ಮೂಲಕ ದಾನಿಗಳ ನೆರವು ಪಡೆದು ಸಂಗ್ರಹಿಸಲಾದ ೧,೦೦,೬೦೦ ರೂಪಾಯಿ ನಗದನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುಪುರದ ಧನವಂತಿ ಅವರಿಗೆ ನೀಡಲಾಯಿತು.
ವಿಹಿಂಪ ಜಿಲ್ಲಾ ಪ್ರಮುಖ್ ವಸಂತ ಗುರುಪುರ, ವಿಹಿಂಪ ಗುರುಪುರ ಘಟಕದ ಅಧ್ಯಕ್ಷ ನಾಗೇಶ ಕೊಟ್ಟಾರಿ, ಬಜರಂಗ ದಳದ ಸಂಯೋಜಕ ಹೇಮಚಂದ್ರ ಕಲ್ಲಕಲೆಂಬಿ, ಸತ್ಸಂಗ ಪ್ರಮುಖ್ ಉಮೇಶ್ ಅಣೆಬಳಿ, ಧನವಂತಿಯವರ ಪತಿ ವಿಹಿಪಂ ಗುರುಪುರ ಘಟಕದ ಉಪಾಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು.