Published On: Tue, Jul 9th, 2024

 ನೂತನ ಎಸ್ಪಿ ಬಂಟ್ವಾಳ ಠಾಣೆಗೆ ಭೇಟಿ

ಬಂಟ್ವಾಳ  : ದ.ಕ. ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಯತೀ‌ಶ್‌ ಎನ್‌ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಂಗಳವಾರ ಬಂಟ್ವಾಳ ನಗರ ಪೊಲೀಸ್ ಠಾಣೆ, ಪೂಂಜಾಲಕಟ್ಟೆ ಪೊಲೀಸ್‌ ಠಾಣೆ ಹಾಗೂ ಬಂಟ್ವಾಳ ಉಪವಿಭಾಗಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಇಲ್ಲಿನ ಅಧಿಕಾರಿಗಳು-ಸಿಬ್ಬಂದಿಗಳಿಗೆ ಬ್ರೀಪಿಂಗ್ ನಡೆಸಿ, ಠಾಣಾ ದಾಖಲಾತಿ, ಕಡತಗಳ ಸೂಕ್ತ ನಿರ್ವಹಣೆ, ಠಾಣಾ ಪರಿಸರದ ಸ್ವಚ್ಚತೆ ಹಾಗೂ ಠಾಣಾ ಕರ್ತವ್ಯಗಳ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಡಿವೈಎಸ್ಪಿ ವಿಜಯಪ್ರಸಾದ್,ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter