ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಬೀದಿ ನಾಟಕದ ಪ್ರದರ್ಶನದ ಮೂಲಕ ಅರಿವು ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್( ರಿ.) ವಿಟ್ಲ ಇದರ ಸಾಲೆತ್ತೂರು ವಲಯದ ಮಂಚಿ ಕಾರ್ಯಕ್ಷೇತ್ರದ ಸಿರಿತನ ಜ್ಞಾನ ವಿಕಾಸ ಕೇಂದ್ರದಲ್ಲಿ ಸದಸ್ಯರಿಗೆಸಂಸಾರ ಕಲಾತಂಡ ಜೋಡುಮಾರ್ಗ ಬಿ.ಸಿ. ರೋಡ್ ಇವರಿಂದ ಬೀದಿ ನಾಟಕದ ಪ್ರದರ್ಶನದ ಮೂಲಕ ಅರಿವು ಕಾರ್ಯಕ್ರಮ ನಡೆಯಿತು.

ನೀರಿನ ಬಳಕೆ, ಜ್ಞಾನ ವಿಕಾಸ ಯೂಟ್ಯೂಬ್, ಸಂಚಾರಿ ನಿಯಮ, ವಿವಿಧ ಕಾಯಿಲೆಗಳು, ಪ್ಲಾಸ್ಟಿಕ್ ಬಳಕೆಯಿಂದಾಗುವ ಸಮಸ್ಯೆ, ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಬರುವ ಸಮಸ್ಯೆಗಳ ಬಗ್ಗೆ ಈ ಸಂದರ್ಭ ಅರಿವು ಮೂಡಿಸಲಾಯಿತು.
ಮಂಚಿ ಒಕ್ಕೂಟದ ಅಧ್ಯಕ್ಷರಾದ ದಿವಾಕರ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು ಪತ್ರಕರ್ತ ಮೌನೇಶ್ ವಿಶ್ವಕರ್ಮ, ದಕ್ಷಿಣಕನ್ನಡ ಹಿರಿಯಪ್ರಾಥಮಿಕ ಶಾಲೆ ಮೊಂತಿಮಾರು ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣೇಶ್ ಪ್ರಭು, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಶೋಕ್,ಉಪಸ್ಥಿತರಿದ್ದರು.
ಒಕ್ಕೂಟ ಪದಾಧಿಕಾರಿ, ಜ್ಞಾನ ವಿಕಾಸ ಕೇಂದ್ರ ಸದಸ್ಯರು ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು ಸೇವಾಪ್ರತಿನಿಧಿ ಚಂಚಲಾಕ್ಷಿ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ಕಾರ್ಯ ಕ್ರಮ ನಿರೂಪಿಸಿದರು
One attachment • Scanned by Gmail