ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯ ಕಿಟ್ ವಿತರಣೆ
ಬಂಟ್ವಾಳ: ಸೇವಾಂಜಲಿಯ ಮೂಲಕ ಸೇವೆ ಪಡೆದವರು ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯದಲ್ಲಿ ಕೈ ಜೋಡಿಸಿದಾಗ ಸೇವಾಂಜಲಿ ಸಂಸ್ಥೆಯ ಸೇವೆ ಇನ್ನಷ್ಟು ಜನರಿಗೆ ತಲುಪಲು ಸಾಧ್ಯವಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಝ್ ಎಚ್.ಟಿ. ಹೇಳಿದರು. ಕ್ಷಯ ಮುಕ್ತ ಭಾರತ ನಿರ್ಮಾಣ ಕಾರ್ಯಕ್ರಮದಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ನಡೆದ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭೂಮಿಯೊಳಗಿನ ಎರೆಹುಳ ಹೇಗೆ ಭೂಮಿಯನ್ನು ಹಸನಾಗಿಸುತ್ತದೋ ಅದೇ ರೀತಿ ಕೃಷ್ಣ ಕುಮಾರ್ ಪೂಂಜರು ಸಮಾಜದಲ್ಲಿ ನೊಂದವರ ಕಷ್ಟಗಳಿಗೆ ಸ್ಪಂದಿಸಿ ಸಮಾಜವನ್ನು ಹಸನಾಗಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಮುಖ್ಯೋಪಾಧ್ಯಾತ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ ಕ್ಷಯ ಮುಕ್ತ ಭಾರತ ಎನ್ನುವ ಪ್ರಧಾನಿಯವರ ಕರೆಗೆ ಕೈ ಸೇವಾಂಜಲಿ ಸಂಸ್ಥೆ ಸ್ಪಂದಿಸಿದ ಪರಿಣಾಮ ಆ ಕಾರ್ಯ ಇಂದು ಸಾರ್ಥಕತೆ ಪಡೆಯುತ್ತಿದೆ. ಸೇವೆ ಕೃಷ್ಣ ಕುಮಾರ್ ಪೂಂಜ ಅವರ ಜೀವನದ ಭಾಗ. ನಿವೃತ್ತ ಜೀವನದಲ್ಲೂ ಅವಿಶ್ರಾಂತರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆಯ ಉದ್ದೇಶ ತಿಳಿಸಿದರು. ಸೇವಾಂಜಲಿ ಆರೋಗ್ಯ ಕೇಂದ್ರದ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿದರು. ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಜಾತ, ಉಮೇಶ್ ಕೊಳಂಬೆ ವೇದಿಕೆಯಲ್ಲಿದ್ದರು.
ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ, ಪದ್ಮನಾಭ ಕಿದೆಬೆಟ್ಟು, ನಾರಾಯಣ ಬಡ್ಡೂರು, ಪ್ರಶಾಂತ್ ತುಂಬೆ, ಕೃಷ್ಣ ತುಪ್ಪೆಕಲ್ಲು, ಸುರೇಶ್ ರೈ ಪೆಲಪಾಡಿ ಉಮಾ ಚಂದ್ರಶೇಖರ್, ಸಾರಮ್ಮ, ಮಧುರಾಜ್ ಉಪಸ್ಥಿತರಿದ್ದರು. ಸುಕೇಶ್ ಶೆಟ್ಟಿ ತೇವು ವಂದಿಸಿದರು., ತಾರಾನಾಥ ಕೊಟ್ಟಾರಿ ತೇವು ಕಾರ್ಯಕ್ರಮ ನಿರೂಪಿಸಿದರು.