ಬಂಟ್ವಾಳ: ಮಳೆಗೆ ಮುಂದುವರಿದಹಾನಿ, ಅಪಾಯದ ಸ್ಥಿತಿಯಲ್ಲಿರುವ ಮನೆಮಂದಿಯ ಸ್ಥಳಾಂತರ
ಬಂಟ್ವಾಳ : ಗುರುವಾರ ಬಂಟ್ವಾಳದಾದ್ಯಂತ ಗಾಳಿ,ಮಳೆಗೆ ಹಾನಿಮುಂದುವರಿದಿದ್ದು,ಅಪಾರ ನಷ್ಟವುಂಟಾಗಿದೆ ಎಂದು ತಾಲೂಕಾಡಳಿತದ ಪ್ರಕಟಣೆ ತಿಳಿಸಿದೆ.ಬಂಟ್ವಾಳ ಕಸಬಾ ಗ್ರಾಮದ ನೆರಂಬೋಳು ಎಂಬಲ್ಲಿ ಚಂದ್ರಾವತಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದ್ದಲ್ಲದೆ ಮನೆಯ ಬದಿಯಲ್ಲಿ ಆಳವಾದ ತಗ್ಗು ಪ್ರದೇಶವಿದ್ದು ಮಣ್ಣು ಕುಸಿದ ಪರಿಣಾಮ ಮನೆಯು ಅಪಾಯ ಸ್ಥಿತಿಯಲ್ಲಿದೆ.
ಮುಂಜಾಗೃತಾಕ್ರಮವಾಗಿ ಮನೆಯವರಿಗೆ ನೋಟಿಸ್ ನೀಡಿ ಸ್ಥಳಾಂತರ ಮಾಡಲಾಗಿದೆ. ಪಕ್ಕಾ ಮನೆ ಕೂಡ ತೀವ್ರ ಹಾನಿಯಾಗಿದೆ.
ಅದೇರೀತಿ ಗೋಳ್ತಮಜಲು ಗ್ರಾಮದ ಉಮೇಶ್ ನಾಯ್ಕ ರವರ ವಾಸ್ತವ್ಯದ ಮನೆ ಮೇಲೆ ಮೇಲಿನ ಮನೆ ಬೀಳುವ ಸಂಭವವಿದೆ.ಮನೆಮಂದಿಯನ್ನು ಮೇಲ್ಕಾರ್ ನಲ್ಲಿರುವ ಅವರ ಅಣ್ಣನ ಮನೆಗೆ ಸ್ಥಳಾಂತರಿಸಲಾಗಿದೆ.
ಇದೇ ಗ್ರಾಮದ ಮೀನಾಕ್ಷಿ ಭಂಡಾರಿ ಯವರ ವಾಸ್ತವ್ಯದ ಮನೆಯ ಪಕ್ಕದ ಬರೆ ಜರಿದಿದ್ದು, ಈ ಮನೆಮಂದಿಯನ್ನು ಕೂಡ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ತಾಲೂಕಾಡಳಿದ ಪ್ರಕಟಣೆ ತಿಳಿಸಿದೆ.