ಬ್ರಹ್ಮರಕೊಟ್ಲು ಹಿ.ಪ್ರಾ.ಶಾಲೆಯಲ್ಲಿ ಬರವಣಿಗೆ ಪುಸ್ತಕ ವಿತರಣೆ, ಆಂಗ್ಲ ಮಾಧ್ಯಮ ಶಿಕ್ಷಣದ ಉದ್ಘಾಟನೆ
ಬಂಟ್ವಾಳ:ಇಲ್ಲಿನ ಬ್ರಹ್ಮರಕೊಟ್ಲು ದ. ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಉಚಿತ ಬರವಣಿಗೆ ಪುಸ್ತಕ ವಿತರಣೆ ಹಾಗೂ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಚಾಲನೆ ನೀಡಲಾಯಿತು. ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರು, ಮಾಜಿ ಸಚಿವರಾದ ಬಿ. ರಮಾನಾಥ ರೈ ಆಂಗ್ಲ ಮಾಧ್ಯಮ ಶಿಕ್ಷಣ ತರಗತಿಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಪೋಷಕರ ಸಹಕಾರ ಅತೀ ಅಗತ್ಯವಿದೆ. ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವು ಆರಂಭ ಆಗಿರುವುದು ಬಡವರ ಪಾಲಿಗೆ ಆಶಾಕಿರಣವಾಗಿದೆ ಎಂದು ಹೇಳಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ.ಎಂ.ಸಿ ಅಧ್ಯಕ್ಷ ಉದಯ್ ಕುಮಾರ್ ಜ್ಯೋತಿಗುಡ್ಡೆ ಇವರು ವಹಿಸಿದ್ದರು . ಇದೇವೇಳೆ ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ ವಿತರಿಸಲಾಯಿತು.
ಶಾಲಾ ದತ್ತು ಸ್ವೀಕಾರ ಸಮಿತಿಯ ಸಂಚಾಲಕ, ಮಾಜಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಕಳ್ಳಿಗೆ ಗ್ರಾಮಭಿವೃದ್ಧಿ ಸಂಘ ಹಾಗೂ ಶಾಲಾ ದತ್ತು ಸ್ವೀಕಾರ ಸಮಿತಿ ಅಧ್ಯಕ್ಷರಾದ ಕಮಲಾಕ್ಷ , ಕಳ್ಳಿಗೆ ಗ್ರಾ.ಪಂ.ಸದಸ್ಯರಾದ ಮಧುಸೂಧನ್ ಶೆಣೈ , ರವಿರಾಜ್ ಜೈನ್ ,ಕನಪಾಡಿ ಕಳ್ಳಿಗೆ ಗ್ರಾಮ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮನೋಜ್ ಹಾಗೂ ಶಾಲಾ ಎಸ್.ಡಿ.ಎಂ. ಸಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಕಲ್ಯಾಣಿ.ಜಿ ಪ್ರಸ್ತಾವಿಸಿ, ಸ್ವಾಗತಿಸಿದರು.ಸಹ ಶಿಕ್ಷಕಿ ಪ್ಲೇವಿ ಪ್ರೀತಿ ಫೆರ್ನಾಂಡಿಸ್ ವಂದಿಸಿದರು. ಸಹ ಶಿಕ್ಷಕಿಯಾದ ಮಂಜುಳಾ. ಡಿ .ಕಾರ್ಯಕ್ರಮ ನಿರೂಪಿಸಿದರು.