ಬಂಟ್ವಾಳ :  ಯಾವುದೇ ಕಲೆಯನ್ನು ಒಮ್ಮೆ ಪ್ರಯತ್ನಪಟ್ಟು  ಅಭ್ಯಾಸ ಮಾಡಿ,ಕಲಿತಿರುವ ಕಲೆ ಮತ್ತೆ ಎಂದೂ ಅವರನ್ನು ಬಿಟ್ಟು ಹೋಗುವುದಿಲ್ಲ ಎಂದು ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಡೇಶಿವಾಲಯ ತಿಳಿಸಿದ್ದಾರೆ.ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ  ನಡೆದ ಚೈತನ್ಯ ೩.೦ ರ ಕಾಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಮಾತನಾಡಿ ಎಲ್ಲರ ಸಹಕಾರದಿಂದ ಚೈತನ್ಯ ಕಾರ್ಯಾಗಾರ ನಿರಂತರ ನಡೆಯುತ್ತಿದ್ದು, ಸಮಾಜ  ಬಾಂಧವರು ಹೆಚ್ಚು,ಹೆಚ್ಚು ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.ಕುಲಾಲ ಸೇವಾದಳದ ಮಾಜಿ ದಳಪತಿ ಸಂದೀಪ್ ಸಾಲ್ಯಾನ್ ಮಾತನಾಡಿ ಕುಲಾಲ ಸಮಾಜ ಬಾಂದವರಿಗೆ ನಾಯಕರಾಗಲು ಕುಲಾಲ ಸೇವಾದಳದಲ್ಲಿ ಉತ್ತಮ ಅವಕಾಶ ಇದೆ ಎಂದರು.


ಪ್ರೇಮನಾಥ ಕುಲಾಲ್ ನೇರಂಬೋಳುರವರು ಕೊಳಲು ನುಡಿಸುವ ಬಗ್ಗೆ ಮಾಹಿತಿ ನೀಡಿದರು.ಕುಲಾಲ ಸಮಾಜದ ಹಿರಿಯರಾದ ಜಯ ಭಂಡಾರಿಬೆಟ್ಟು, ನ್ಯಾಯವಾದಿ ಯಶೋಧ ಎಸ್. ಉಪಸ್ಥಿತರಿದ್ದರು. ಸೇವಾದಳದ ಸದಸ್ಯರುಗಳಾದ ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ಜಯಂತ ಅಗ್ರಬೈಲು, ಜಯಾನಂದ ಸಜೀಪ, ರಾಘವೇಂದ್ರ ಕಾಮಾಜೆ, ಯಾದವ ಅಗ್ರಬೈಲು, ರಾಜೇಶ್ ಭಂಡಾರಿಬೆಟ್ಟು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.


ಕಾರ್ಯದರ್ಶಿ ಚಂದ್ರಶೇಖರ ದೈಪಲ ಸ್ವಾಗತಿಸಿದರು. ಕೃತಿಕ್ ಕುಮಾರ್ ವೈ.ಎಸ್. ವಂದಿಸಿದರು. 

By Suddi9

Leave a Reply

Your email address will not be published. Required fields are marked *